varthabharthi

ರಾಷ್ಟ್ರೀಯ

ಮಕ್ಕಳ ಸಾವಿಗೆ ಕಾರಣ ಆಮ್ಲಜನಕ ಕೊರತೆ: ಸಾಕ್ಷಿ ಮಹಾರಾಜ್

ವಾರ್ತಾ ಭಾರತಿ : 12 Aug, 2017

ಗೋರಖ್‌ಪುರ, ಆ.12: ಗೋರಖ್‌ಪುರದ ಆಸ್ಪತ್ರೆಯಲ್ಲಿ ಮಕ್ಕಳ ಸಾವಿಗೆ ಕಾರಣ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿರುವುದು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದುರಂತ ಸಂಭವಿಸಲು ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗೋರಖ್‌ಪುರದ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಸಂಭವಿಸಿರುವುದು ವಿಷಾದಕರ. ಪಾವತಿ ಬಾಕಿ ಇರುವ ಕಾರಣಕ್ಕೆ ಆಮ್ಲಜನಕ ಪೂರೈಸದ ವ್ಯಕ್ತಿ ಈ ದುರಂತಕ್ಕೆ ಕಾರಣ ಎಂದು ಅವರು ಹೇಳಿದರು.

  ಈ ಘಟನೆಯನ್ನು ನರಹತ್ಯೆ ಎಂದು ವ್ಯಾಖ್ಯಾನಿಸುವ ಮಾದ್ಯಮ ವರದಿಯನ್ನು ನಿರಾಕರಿಸಿದ ಅವರು, ತಾನು ಹಾಗೆ ಹೇಳಲಾರೆ. ಆದರೆ, ಇದು ಸಹಜ ಸಾವಲ್ಲ. ಇಂತಹ ಘಟನೆಗಳು ಮರುಕಳಿಸದೇ ಇರಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

 

Comments (Click here to Expand)