varthabharthi

ಗಲ್ಫ್ ಸುದ್ದಿ

ರಿಯಾದ್ ಮಲಾಝ್ ಘಟಕದ ವಾರ್ಷಿಕ ಮಹಾಸಭೆ

ವಾರ್ತಾ ಭಾರತಿ : 12 Aug, 2017

ರಿಯಾದ್,ಆ.12: ಅಲ್ ಮದೀನಾ  ಯತೀಂ ಖಾನ ಮಂಜನಾಡಿ ರಿಯಾದ್ ಮಲಾಝ್ ಘಟಕದ ವಾರ್ಷಿಕ ಮಹಾಸಭೆ ಶುಕ್ರವಾರ ಮಲಾಝ್ ಘಟಕದ ಅಧ್ಯಕ್ಷ ಜನಾಭ್ ಫಾರೂಕ್ ಅಬ್ಬಾಸ್ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಮಲಾಝ್ ನಲ್ಲಿ  ನಡೆಯಿತು.

ಗತ ಸಾಲಿನ ಲೆಕ್ಕಪತ್ರ ಹಾಗೂ ವರದಿಯನ್ನು ಪ್ರ.ಕಾರ್ಯದರ್ಶಿ ಮಂಡಿಸಿದರು. ನಂತರ ಗತ ಸಾಲಿನ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಇದೇ ಸಂಧರ್ಭದಲ್ಲಿ ಸುದೀರ್ಘ 14 ವರ್ಷ ಕಾಲ ಮಲಾಝ್ ಘಟಕದ ಅಧ್ಯಕ್ಷರಾಗಿದ್ದು, ಅಗಸ್ಟ್  18 ರಂದು  ಗಲ್ಫ್ ಜೀವನಕ್ಕೆ ವಿದಾಯ ಕೋರುತ್ತಿರುವ ಜನಾಬ್ ಫಾರೂಕ್ ಉಳ್ಳಾಲ ರಿಗೆ ಭಾವಪೂರ್ಣ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಮೊದಲಿಗೆ ಶಮೀರ್ ಉಳ್ಳಾಲ ಕಿರಾಅತ್ ಪಠಿಸಿದರು, ಎನ್,ಎಸ್. ಹನೀಫ್  ಸ್ವಾಗತ ಮಾಡಿದರೆ, ಪ್ರ.ಕಾರ್ಯದರ್ಶಿ ಮನ್ಸೂರ್ ಪಡಿಕ್ಕಲ್ ಧನ್ಯವಾದ ಸಮರ್ಪಿಸಿದರು.

ನೂತನ ಪದಾಧಿಕಾರಿಗಳ ವಿವರ:
ಗೌರವಾದ್ಯಕ್ಷರು: ಫಾರೂಕ್ ಅಬ್ಬಾಸ್ ಉಳ್ಳಾಲ ,ಅಧ್ಯಕ್ಷರು - ಅಬ್ದುಲ್ ಖಾದರ್ ಸಾದಾತ್, ಉಪಾಧ್ಯಕ್ಷರು - ಝಹೀರ್ ಅಬ್ಬಾಸ್ , ಪ್ರ.ಕಾರ್ಯದರ್ಶಿ - ಮನ್ಸೂರ್ ಪಡಿಕ್ಕಲ್,ಜೊತೆ ಕಾರ್ಯದರ್ಶಿಗಳು - ಬಶೀರ್ ಮೆದು, ಯಾಸಿರ್ ಮೊಂಟೆಪದವು, ಕೋಶಾಧಿಕಾರಿ - ಎನ್.ಎಸ್. ಹನೀಫ್ 
ಸಂಚಾಲಕ - ಇಬ್ರಾಹಿಂ ಹಮ್ಮಬ್ಬ,ಕೋ-ಆರ್ಡಿನೇಟರ್ - ಮುಹಿಯುದ್ದೀನ್ ಮೊಂಟೆಪದವು

ಕಾರ್ಯಕಾರಿ ಸಮಿತಿ ಸದಸ್ಯರುಗಳು:
ಎನ್,ಎಸ್ ಇಸ್ಮಾಯಿಲ್ ಕೈರಂಗಳ,ಅನ್ಸಾರ್ ಉಳ್ಳಾಲ, ಸುಹೈಲ್ ಅಬ್ಬಾಸ್, ಶಮೀರ್ ಉಳ್ಳಾಲ, ಆಸಿಫ್ ಮೋಂಟುಗೋಳಿ, ಆಸಿಫ್ ಕೈರಂಗಳ

 

Comments (Click here to Expand)