varthabharthi

ಕ್ರೀಡೆ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಬಜರಂಗ್ ಪೂನಿಯಾ ಅರ್ಹತೆ

ವಾರ್ತಾ ಭಾರತಿ : 13 Aug, 2017

ಪ್ಯಾರಿಸ್, ಆ.12: ವಿಶೇಷ ಆಯ್ಕೆ ಟ್ರಯಲ್‌ನಲ್ಲಿ ರಾಹುಲ್ ಮಾನ್‌ರನ್ನು ಮಣಿಸಿದ ಏಷ್ಯನ್ ಚಾಂಪಿಯನ್ ಬಜರಂಗ್ ಪೂನಿಯಾ ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 65 ಕೆಜಿ ಫ್ರೀಸ್ಟೈಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಬಜರಂಗ್ ಅವರು ಮಾನ್‌ರನ್ನು 10-0 ಅಂತರದಿಂದ ಮಣಿಸಿದರು. ಈ ಮೂಲಕ ಆಗಸ್ಟ್ 21 ರಂದು ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಶಿಪ್‌ನ ಅಂತಿಮ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದರು. ಕಳೆದ ತಿಂಗಳು ಸೋನೆಪತ್‌ನಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ಮಾನ್ 65ಕೆಜಿ ವಿಭಾಗದಲ್ಲಿ ಜಯ ಸಾಧಿಸಿದ್ದರು. ಜ್ವರದಿಂದಾಗಿ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ 65 ಕೆಜಿ ತೂಕದಲ್ಲಿ ಅಂತಿಮ ಟ್ರಯಲ್ಸ್ ನಡೆಸುವಂತೆ ಬಜರಂಗ್ ಭಾರತದ ಕುಸ್ತಿ ಫೆಡರೇಶನ್‌ಗೆ ಮನವಿ ಸಲ್ಲಿಸಿದ್ದರು.

 

Comments (Click here to Expand)