varthabharthi

ನಿಮ್ಮ ಅಂಕಣ

ಸರ್ವೋಚ್ಚ ನ್ಯಾಯಾಲಯದ ಉತ್ತಮ ಮಾರ್ಗದರ್ಶಿ

ವಾರ್ತಾ ಭಾರತಿ : 14 Aug, 2017
ಪ್ರೋ. ಎಸ್.ಆರ್.ದೇವಪ್ರಕಾಶ್, ತುಮಕೂರು

ಮಾನ್ಯರೆ,

ವರದಕ್ಷಿಣೆ ವಿರೋಧಿ ಕಾನೂನು, ಸೆಕ್ಷನ್ 498 ಎ (ಸಿ.ಪಿ.ಸಿ), ಚಾಲ್ತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲ ಯವು ಕೆಲವು ಸೂಚನೆಗಳನ್ನು ಕೊಟ್ಟಿರುವುದು ಶ್ಲಾಘನೀಯ ಹಾಗೂ ಸ್ವಾಗತಾರ್ಹ. ಈ ಕಾನೂನು ಪ್ರಾರಂಭದಿಂದಲೂ ದುರುಪಯೋಗ ವಾಗುತ್ತಿರುವುದನ್ನು ನಾವು ನೋಡಿದ್ದೇವೆ. ವಂಶದಗೌರವ ಮತ್ತು ಕುಟುಂಬದ ಮರ್ಯಾದೆ ಇದರಿಂದ ಧೂಳೀಪಟವಾಗಿರುವ ನಿದರ್ಶನಗಳಿವೆ. ಅನೇಕ ಮಹಿಳಾ ಸಹಾಯ ಸಂಸ್ಥೆಗಳು ತಮ್ಮ ಹಿತಾಸಕ್ತಿಗೋಸ್ಕರ ಕುಟುಂಬವನ್ನು ಕೂಡಿಸುವುದಕ್ಕೆ ಬದಲಾಗಿ ಒಡೆಯುವುದನ್ನು ಕಾಣುತ್ತೇವೆ. ಗೌರವದ, ಹಿರಿಯ ನಾಗರಿಕ ವೃದ್ಧ ತಂದೆ ತಾಯಿಗಳು ಶಾಂತಿ ಮತ್ತು ನೆಮ್ಮದಿಯಿಂದ ಬಾಳಲು ಬಿಡದೆ ಪುತ್ರನ ಮದುವೆಯೇ ಮುಳುವಾಗಿ, ಮುಳ್ಳಿನ ಮಂಚವಾಗಿ ಪರಿಮಿಣಿಸಿದರೆ ಏನು ಲಾಭ? ಗುಬ್ಬಿಗಳ ಮೇಲೆ ವಿನಾಕಾರಣ ಬ್ರಹ್ಮಾಸ್ತ್ರ ಪ್ರಯೋಗದ ಭಯ ಹುಟ್ಟಿಸಿದರೆ ಅದು ಪಕ್ಷಪಾತವಿಲ್ಲದ ಕಾನೂನು ಅಲ್ಲ, ಬದಲಿಗೆ ನ್ಯಾಯದ ಅಂಧತ್ವದ ಪರಾಕಾಷ್ಠೆಯಾಗುತ್ತದೆ. ಸುಪ್ರೀಂ ಕೋರ್ಟ್ ತಿಳಿಸಿರುವ ಈಗಿನ ಮಾರ್ಗಸೂಚಿಗಳು ಪತ್ನಿಯರ ಮೇಲಿನ ದೌರ್ಜನ್ಯಕ್ಕೆ ಉತ್ತೇಜನ ಕೊಡುತ್ತಿಲ್ಲ. ಬದಲಾಗಿ ಒಂದು ವಿಶ್ಲೇಷಣೆಯ ಹಂತವೇರ್ಪಡಿಸಿರುವುದು ಎರಡು ಗುಂಪಿನವರಿಗೂ ತಾಳ್ಮೆಯಿಂದ ವಿವೇಚಿಸುವ ವೇದಿಕೆಯೊಂದನ್ನು ಒದಗಿಸಿಕೊಟ್ಟಂತಾಗಿದೆ. 

 

Comments (Click here to Expand)