ಬರ್ಕಿನಫಾಸೊ ರೆಸ್ಟೋರೆಂಟ್ ಮೇಲೆ ದಾಳಿ: 18 ಸಾವು
ಕ್ವಾಗಡೌಗೊ (ಬರ್ಕಿನಫಾಸೊ), ಆ. 14: ಪಶ್ಚಿಮ ಆಫ್ರಿಕದ ದೇಶ ಬರ್ಕಿನಫಾಸೊದ ರಾಜಧಾನಿ ಕ್ವಾಗಡೌಗೊದಲ್ಲಿರುವ ರೆಸ್ಟೋರೆಂಟ್ ಒಂದರ ಮೇಲೆ ದಾಳಿ ನಡೆಸಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಮಾಡಿವೆ ಎಂದು ಭದ್ರತಾ ಪಡೆಯ ಮೂಲವೊಂದು ಸೋಮವಾರ ತಿಳಿಸಿದೆ.
ಈ ನಡುವೆ, ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ ಎಂದು ಸೇನಾಧಿಕಾರಿಯೊಬ್ಬರು ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
‘‘ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 18. ಅವರ ಪೈಕಿ 14 ಮಂದಿ ಶವಗಳು ಇನ್ನೂ ಸ್ಥಳದಲ್ಲೇ ಬಿದ್ದಿವೆ. ಅವರ ಪೈಕಿ ಇಬ್ಬರು ಭಯೋತ್ಪಾದಕರ ಶವಗಳೂ ಇವೆ’’ ಎಂದು ಅವರು ಹೇಳಿದರು.
ಭಯೋತ್ಪಾದಕರು ರವಿವಾರ ತಡ ರಾತ್ರಿ ರಾಜಧಾನಿಯಲ್ಲಿರುವ ಟರ್ಕಿ ರೆಸ್ಟೋರೆಂಟೊಂದಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿರುವುದನ್ನು ಸ್ಮರಿಸಬಹುದಾಗಿದೆ.
Next Story