ಪಿಝಾ ಕೆಫೆಗೆ ನುಗ್ಗಿದ ಕಾರು : ಬಾಲಕಿ ಸಾವು
ಪ್ಯಾರಿಸ್, ಆ.15: ಪ್ಯಾರಿಸ್ನ ಪೂರ್ವದಲ್ಲಿರುವ ಸೆಪ್ಟ್-ಸಾರ್ಟ್ಸ್ ನಗರದಲ್ಲಿರುವ ಪಿಝಾ ಕೆಫೆಗೆ ಕಾರೊಂದು ಅಪ್ಪಳಿಸಿದ ಪರಿಣಾಮ ಎಂಟು ವರ್ಷದ ಬಾಲಕಿಯೋರ್ವಳು ಮೃತಪಟ್ಟಿದ್ದು ಕನಿಷ್ಟ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಚಾಲಕನನ್ನು ಬಂಧಿಸಲಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಅಲ್ಜೀರಿಯಾ ದೇಶದ ಪ್ರಜೆಯೋರ್ವ ಫ್ರೆಂಚ್ ಯೋಧರ ಪಡೆಯತ್ತ ತನ್ನ ಕಾರನ್ನು ಚಲಾಯಿಸಿದ ಘಟನೆ ನಡೆದಿತ್ತು.
Next Story