ಮಡಿಕೇರಿ : ಮರ್ಕಝ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
ಮಡಿಕೇರಿ ಆ.16 :ಕೊಟ್ಟಮುಡಿಯ ಮರ್ಕಝ್ ಪಬ್ಲಿಕ್ ಶಾಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವÀನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಪಿ.ಎ.ಯೂಸುಫ್ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ನಜóರಿಯ, ಹೊದವಾಡ ಗ್ರಾ.ಪಂ ಸದಸ್ಯರಾದ ಪಿ.ಎ.ಶಾಫಿ, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರು ಹಾಗೂ ಶಿಕ್ಷಕ ವೃಂದ ದಿನದ ಮಹತ್ವದ ಕುರಿತು ಮಾತನಾಡಿದರು.
ನಂತರ ವಿದ್ಯಾರ್ಥಿಗಳು ಭಾಷಣ ಮತ್ತು ಹಾಡುಗಾರಿಕೆ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಂಚಿಕೊಂಡರು. ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
Next Story