ಟಿಕೆಟ್ ರಹಿತ ಪ್ರಯಾಣ : 13ಲಕ್ಷ ರೂ. ದಂಡ ವಸೂಲಿ
ಬೆಂಗಳೂರು, ಆ. 16: ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ ಒಟ್ಟು 7922 ಮಂದಿಯಿಂದ ಒಟ್ಟು 13 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಲ್ಲಿ ಸಂಚರಿಸುವ ವಾಹನಗಳನ್ನು ತನಿಖಾ ತಂಡಗಳು ಜುಲೈನಲ್ಲಿ ಒಟ್ಟು 22,457 ಟ್ರಿಪ್ಗಳನ್ನು ತಪಾಸಣೆ ನಡೆಸಿ 7922 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ ಅವರಿಂದ ಒಟ್ಟು 13,04,580 ರೂ.ದಂಡ ವಸೂಲಿ ಮಾಡಲಾಗಿದೆ.
ಅಲ್ಲದೆ, ಮಹಿಳಾ ಪ್ರಯಾಣಿಕರಿಗೆಂದೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 414 ಪುರುಷ ಪ್ರಯಾಣಿಕರಿಂದ ಒಟ್ಟು 41,400 ರೂ.ದಂಡ ವಸೂಲಿ ಮಾಡಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಸಂಸ್ಧೆಯ ವಾಹನಗಳಲ್ಲಿ ಪ್ರಯಾಣಿಸುವ ವೇಳೆ ಅಧಿಕೃತ ಟಿಕೆಟ್, ಪಾಸ್ ಪಡೆದು ಸಂಚರಿಸಬೇಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ.
Next Story