ಉದ್ಯಾವರ ಎಂಇಟಿ ಶಾಲೆ: ಸ್ವಾತಂತ್ರ್ಯೋತ್ಸವ
ಉಡುಪಿ, ಆ.16: ಉದ್ಯಾವರ ಎಂ.ಇ.ಟಿ. ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 71ನೆ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.
ಸೇನೆಯ ನಿವೃತ ಲಾನ್ಸ್ನಾಕ್ ಆರ್.ಎಲ್.ಡಯಾಸ್ ಧ್ವಜರೋಹಣ ನೆರವೇರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್, ಕಲಿಮುಲ್ಲಾ ತೊನ್ಸೆ, ಹಾಜಿ ಅಬ್ದುಲ್ಲಾ ಪರ್ಕಳ, ಅನ್ಸಾರ್ ಅಹ್ಮದ್ ಶಾಲಾ ಆಡಳಿತಾಧಿಕಾರಿ ಖಲೀಲ್ ಅಹ್ಮದ್, ಪ್ರಾಂಶುಪಾಲೆ ಡಾ.ಜುನೈದಾ ಸುಲ್ತಾನಾ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರಗಿದವು. ನಂತರ ಮಕ್ಕಳ ಸ್ವಾತಂತ್ರ್ಯೋತ್ಸದ ನಡಿಗೆಯನ್ನು ಉದ್ಯಾವರ ಪೇಟೆಯಲ್ಲಿ ಹಮ್ಮಿಕೊಳ್ಳ ಲಾಗಿತ್ತು. ದಾರಿಯುದ್ದಕ್ಕೂ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ಶುಭ ಹಾರೈಸಿದರು.
Next Story