ಸಿಮೊನಾ ಹಾಲೆಪ್, ಮುಗುರುಝ ಫೈನಲ್ಗೆ ಲಗ್ಗೆ
ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿ
ಸಿನ್ಸಿನಾಟಿ, ಆ.20: ಹಾಲಿ ವಿಂಬಲ್ಡನ್ ಚಾಂಪಿಯನ್ ಸ್ಪೇನ್ನ ಗಾರ್ಬೈನಾ ಮುಗುರುಝ ಮತ್ತು ವಿಶ್ವದ ನಂ.2 ಆಟಗಾರ್ತಿ ರುಮೇನಿಯಾದ ಸಿಮೊನಾ ಹಾಲೆಪ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ. ಮುಗುರುಝ ಅವರು ಹಾಲಿ ಚಾಂಪಿಯನ್ ಸ್ಪೇನ್ನ ಕರೋಲಿನಾ ಪ್ಲೆಸ್ಕೋವಾ ವಿರುದ್ಧ 6-3, 6-2 ನೇರ ಸೆಟ್ಗಳಿಂದ ಜಯ ಗಳಿಸಿದರು.
ಇದೇ ವೇಳೆ ಸಿಮೊನಾ ಹಾಲೆಪ್ ಅವರು ಸ್ಲೋನ್ ಸ್ಟೀಫನ್ಸ್ ಅವರನ್ನು 6-2, 6-1 ನೇರ ಸೆಟ್ಗಳೊಂದಿಗೆ ಸೋಲಿಸಿದರು. ಇದರೊಂದಿಗೆ ಹಾಲೆಪ್ ಅವರು ಫೈನಲ್ನಲ್ಲಿ ನಂ.1 ಸ್ಥಾನಕ್ಕಾಗಿ ಹಣಾಹಣಿ ನಡೆಸಲಿದ್ದಾರೆ.
ಕಿರ್ಗಿಯೊಸ್- ದಿಮಿಟ್ರೋವ್ ಫೈನಲ್ಗೆ: ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಅವರು ಬಲ್ಗೇರಿಯಾದ 11ನೆ ರ್ಯಾಂಕಿನ ಗ್ರೆಗೋರಿ ದಿಮಿಟ್ರೋವ್ ಅವರನ್ನು ಎದುರಿಸಲಿದ್ದಾರೆ.
ಸೆಮಿಫೈನಲ್ನಲ್ಲಿ ಕಿರ್ಗಿಯೊಸ್ ಅವರು ಸ್ಪೇನ್ನ ಡೇವಿಡ್ ಫೆರೆರ್ ಅವರನ್ನು 7-6(7/3), 7-6(7/4) ಅಂತರದಿಂದ ಸೋಲಿಸಿದರು.ದಿಮಿಟ್ರೋವ್ ಅವರು ಅಮೆರಿಕದ ಜಾನ್ ಇಸ್ನರ್ ಅವರನ್ನು 7-6(7/4), 7-6(12/10) ಅಂತರದಲ್ಲಿ ಬಗ್ಗು ಬಡಿದರು.