ಅಧ್ಯಾಪಕಿಯ ಪ್ರಾಣಕ್ಕೆ ಕುತ್ತಾದ ‘ನಗು’ !
ವಾಷಿಂಗ್ಟನ್, ಆ.21: ಮೆಕ್ಸಿಕೊದಲ್ಲಿ ರಜೆದಿನಗಳನ್ನು ಕಳೆಯುತ್ತಿದ್ದ ಅಮೆರಿಕದ ಅಧ್ಯಾಪಕಿಯೊಬ್ಬರು ನಗು ನಗುತ್ತಾ ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಚಾಲ್ರ್ಸ್ ಎ ಹ್ಯೂಸ್ಟನ್ ಶಾಲೆಯ ಅಧ್ಯಾಪಕಿ ಶಾರನ್ ರೆಗೊಲಿ ಸಿಫರ್ನೋಕ್(50) ಮೃತಪಟ್ಟ ಮಹಿಳೆ.
ಪುತ್ರಿಯ ಜೊತೆ ಮೆಕ್ಸಿಕೊದ ಗೆಳೆತಿಯ ಮನೆಯಲ್ಲಿ ಶಾರನ್ ಇದ್ದರು. ಬಾಲ್ಕನಿಯಲ್ಲಿ ಮಾತಾಡುತ್ತಾ ಇದ್ದರು. ಈ ಸಂದರ್ಭ ನಗಲು ಶುರು ಮಾಡಿದ ಅವರು, ನಗು ತಡೆಯಲಾಗದೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಸಹೋದರ ಡೇವಿಡ್ ರೆಗೊಳಿ ಹೇಳಿದರು. ಗಂಭೀರವಾಗಿ ಗಾಯಗೊಂಡ ಇವರನ್ನು ಸೇರಿಸಲಾದರೂ ಅವರು ಬದುಕುಳಿಯಲಿಲ್ಲ.
Next Story