varthabharthi

ಮಾಹಿತಿ - ಮಾರ್ಗದರ್ಶನ

ಕಂಪ್ಯೂಟರ್ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 28 Aug, 2017

ಮಂಗಳೂರು, ಆ.28: ನಗರದ ಕದ್ರಿಹಿಲ್ಸ್‌ನಲ್ಲಿರುವ ಸರಕಾರಿ ಐ.ಟಿ.ಐ. (ಮಹಿಳಾ) ಸಂಸ್ಥೆಯಲ್ಲಿ ಐ.ಎಂ.ಸಿ. ಕೋಟಾದಡಿಯಲ್ಲಿ ಸಿ.ಒ.ಪಿ.ಎ. (ಕಂಪ್ಯೂಟರ್ ಅಪರೇಟರ್ ಆಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್) 1 ವರ್ಷ ತರಬೇತಿ ಅವಧಿ. ಎಲೆಕ್ಟ್ರಾನಿಕ್ ಮೆಕ್ಯಾನಿಕ್ 2 ವರ್ಷ ತರಬೇತಿ ಅವಧಿ ವೃತ್ತಿಗಳಲ್ಲಿ ಸ್ಥಾನಗಳು ಖಾಲಿ ಇದ್ದು, ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಪ್ರವೇಶ ಬಯಸಿದಲ್ಲಿ ತಕ್ಷಣ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2216360 / 9845226485 ಸಂಪರ್ಕಿಸಲು ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಕದ್ರಿಹಿಲ್ಸ್, ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

 

Comments (Click here to Expand)