varthabharthi

ಇ-ಜಗತ್ತು

ನೂತನ ಮೂರು ಐಫೋನ್ ಗಳ ಬೆಲೆ ಎಷ್ಟು ಗೊತ್ತೇ ?

ವಾರ್ತಾ ಭಾರತಿ : 13 Sep, 2017

ಹೊಸದಿಲ್ಲಿ, ಸೆ.13: ತಂತ್ರಜ್ಞಾನ ದೈತ್ಯ ‘ಆ್ಯಪಲ್’ ಸಂಸ್ಥೆ ನೂತನ 3 ಐಫೋನ್ ಗಳನ್ನು ಬಿಡುಗಡೆ ಮಾಡಿದ್ದು, ಐಫೋನ್ ಪ್ರಿಯರು ಈಗಾಗಲೇ ಈ ಫೋನನ್ನು ಖರೀದಿಸಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಆ್ಯಪಲ್ ಐಫೋನ್ ತನ್ನ ಹೊಸ ಮಾದರಿಯನ್ನು ಪರಿಚಯಿಸಿದೆ.

ಐಫೋನ್ 8 ಹಾಗೂ ಐಫೋನ್ 8 ಪ್ಲಸ್ 64 ಜಿಬಿ ಮತ್ತು 256 ಜಿಬಿಯ ಎರಡು ಬಗೆಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 64 ಸಾವಿರ ರೂ.ಗಳಿಂದ ಆರಂಭವಾಗಲಿದೆ. ಸೆಪ್ಟಂಬರ್ 29ರಿಂದ ಆ್ಯಪಲ್ ನ ಅಧಿಕೃತ ಮರುಮಾರಾಟ ಮಳಿಗೆಗಳಲ್ಲಿ ಈ ಐಫೋನ್ ಗಳು ಲಭ್ಯವಾಗಲಿದೆ ಎಂದು ಆ್ಯಪಲ್ ಇಂಡಿಯಾ ತಿಳಿಸಿದೆ.

ಮೊದಲ ಬಾರಿಗೆ ಲಾಂಚ್ ಆದ ಐಫೋನ್ ನ 10ನೆ ವಾರ್ಷಿದಂಗವಾಗಿ ‘ಐಫೋನ್ ಎಕ್ಸ್’ ಮಾರುಕಟ್ಟೆಗೆ ಕಾಲಿಡಲಿದೆ. ‘ಫೇಸ್ ರೆಕಗ್ನಸೇಶನ್’ ಹಾಗೂ ‘ಸೂಪರ್ ರೆಟಿನಾ ಡಿಸ್ ಪ್ಲೇ’ ಇದರ ವಿಶೇಷತೆಯಾಗಿದೆ. ಈ ಐಫೋನ್ 64 ಜಿಬಿ ಹಾಗೂ 256 ಜಿಬಿ ಎಂಬ 2 ವಿಧಗಳಲ್ಲಿದ್ದು, ನವೆಂಬರ್ 3ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಇದರ ಬೆಲೆ 89,000 ರೂ.ಗಳಿಂದ ಆರಂಭವಾಗಲಿದೆ. 256 ಜಿಬಿಯ ಐಫೋನ್ ಬೆಲೆ 1,02,000 ರೂ,ಗಳಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)