varthabharthi

ಮಾಹಿತಿ - ಮಾರ್ಗದರ್ಶನ

ಹಾಸನ : ಸೆ. 22 ರಂದು ಉದ್ಯೋಗ ಮೇಳ

ವಾರ್ತಾ ಭಾರತಿ : 13 Sep, 2017

ಹಾಸನ,ಸೆ. 13: ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೆ. 22 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ನಡೆಸುತ್ತಿದ್ದು ಹಾಸನ ಮತ್ತು ಬೆಂಗಳೂರಿನ ಹೆಸರಾಂತ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿಗಾಗಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಐ.ಟಿ.ಐ, ಡಿಪ್ಲೋಮ, ಎಂ.ಬಿ.ಎ, ಇಂಜಿನಿಯರಿಂಗ್, ಡ್ರೈವರ್, ನರ್ಸಿಂಗ್‍ನಲ್ಲಿ ತೇರ್ಗಡೆ ಹೊಂದಿದ 18-35 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದೆ.

ಆಸಕ್ತರು ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು ಮತ್ತುಆಧಾರ್‍ಕಾರ್ಡ್, ಸ್ವವಿವರವುಳ್ಳ ಬಯೋಡೇಟ ಪ್ರತಿಗಳೊಂದಿಗೆ ಹಾಸನ ಜಿಲ್ಲಾಉದ್ಯೋಗ ವಿನಿಮಯಕಚೇರಿಗೆ ಹಾಜರಾಗಿಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿಜೆ.ಬಿ. ವಿಜಯಲಕ್ಷ್ಮಿಉದ್ಯೋಗಾಧಿಕಾರಿಜಿಲ್ಲಾಉದ್ಯೋಗ ವಿನಿಮಯಕಚೇರಿ ಹಾಸನ ಇವರನ್ನುಖುದ್ದಾಗಿಅಥವಾದೂರವಾಣಿ ಸಂಖ್ಯೆ 08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲುಕೋರಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)