varthabharthi

ಮಾಹಿತಿ - ಮಾರ್ಗದರ್ಶನ

ಸೈನಿಕ ಶಾಲೆ ಸೇರ್ಪಡೆಗೆ ಅವಕಾಶ

ವಾರ್ತಾ ಭಾರತಿ : 20 Sep, 2017

ಉಡುಪಿ, ಸೆ.20: ವಿದ್ಯಾರ್ಥಿಗಳನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ/ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ತರಬೇತಿಗೊಳಿಸುವ ಉದ್ದೇಶದಿಂದ ಕೊಡಗು ಸೈನಿಕ ಶಾಲೆಯಲ್ಲಿ 2018-19ನೇ ಸಾಲಿನ 6ನೇ ಮತ್ತು 9ನೇ ತರಗತಿಯ ದಾಖಲಾತಿ ಪ್ರಾರಂಭಗೊಂಡಿದೆ.

ವಿದ್ಯಾರ್ಥಿಯೊಬ್ಬ 6ನೇ ತರಗತಿಗೆ ಸೇರ್ಪಡೆಗೊಳ್ಳಲು 2007ರ ಜು.2ರಿಂದ 2008ರ 1ನೇ ಜುಲೈ ತಿಂಗಳ ಮದ್ಯೆ ಜನಿಸಿರಬೇಕು ಹಾಗೂ 9ನೇ ತರಗತಿಗೆ ಸೇರ್ಪಡೆಗೊಳ್ಳಲು 2004ರ ಜು.2ರಿಂದ 2005ರ ಜು.1ರ ಮಧ್ಯೆ ಜನಿಸಿರಬೇಕು. ವಿದ್ಯಾರ್ಥಿಗಳನ್ನು ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ವೌಖಿಕ ಸಂದರ್ಶನ ಮತುತಿ ವೈದ್ಯಕೀಯ ತಪಾಸಣೆ ಮೂಲಕ ಸೇರ್ಪಡೆ ಮಾಡಿಕೊಳ್ಳಲಾಗುವುದು.

ಸೈನಿಕ ಶಾಲೆಯಲ್ಲಿ 10+02 ಸಿಬಿಎಸ್‌ಸಿ(ವಿಜ್ಞಾನ ವಿಭಾಗ) ಪಠ್ಯಕ್ರಮವಿದ್ದು, 6 ಮತ್ತು 9ನೇ ತರಗತಿಯ ಪಶ್ನೆಪತ್ರಿಕೆಗಳು ಕ್ರಮವಾಗಿ 5 ಹಾಗೂ 8ನೇ ತರಗತಿಯ ಸಿಬಿಎಸ್‌ಸಿ ಪಠ್ಯಕ್ರಮದ ಆಧಾರದಲ್ಲಿರುತ್ತದೆ. ಇದಕ್ಕಾಗಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ 2018ರ ಜ.7ರಂದು ಕೊಡಗಿನ ಸೈನಿಕ ಶಾಲೆ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ. 9ನೇ ತರಗತಿಯ ಪ್ರವೇಶ ಪರೀಕ್ಷೆಯು ಕೊಡಗು ಸೈನಿಕ ಶಾಲೆಯಲ್ಲಿ ನಡೆಯಲಿದೆ.

ಇದಕ್ಕಾಗಿ ಇಲಾಖೆಯ ವೆಬ್‌ಸೈಟ್-www.sainikschoolkodgu.edu.in  - ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08276-278963 ಅಥವಾ ಇಲಾಖಾ ವೆಬ್ ಸೈಟ್‌ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)