varthabharthi

ಓ ಮೆಣಸೇ

ಓ ಮೆಣಸೇ..

ವಾರ್ತಾ ಭಾರತಿ : 25 Sep, 2017
ಪಿ.ಎ.ರೈ

ಕೇರಳದಲ್ಲಿ ಬಿಜೆಪಿಯು ವಾಮನಾವತಾರ ತಾಳಿ ರಾಕ್ಷಸ (ಕಮ್ಯುನಿಸ್ಟರು)ರನ್ನು ಪಾತಾಳಕ್ಕೆ ತುಳಿಯಬೇಕು. - ನಳಿನ್ ಕುಮಾರ್ ಕಟೀಲು, ಸಂಸದ

ಇನ್ನೊಬ್ಬ ಬಲಿಚಕ್ರವರ್ತಿಯ ಬಲಿಗೆ ಕೇರಳೀಯರು ಅವಕಾಶ ಕೊಡಲಾರರು.
---------------------
ನಾವು ಅಮೆರಿಕದ ಜೊತೆಗೂಡಿ ಹಲವಾರು ಶಾಂತಿಪಾಲನಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. -ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ.

ದೇಶದೊಳಗೆ ಹೆಚ್ಚುತ್ತಿರುವ ಹಿಂಸೆಯಿಂದಲೇ ಗೊತ್ತಾಗಿ ಬಿಡುತ್ತದೆ.

---------------------

ಬುಲೆಟ್‌ಗೆ ಬುಲೆಟ್‌ನಿಂದಲೇ ಉತ್ತರ ನೀಡಲಾಗುವುದು. - ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ.

ಬುಲೆಟ್ ಟ್ರೈನ್ ಬಗ್ಗೆ ಬಿಡುತ್ತಿರುವ ಬುಲ್ಲೆಟ್ ಆಗಿರಬಹುದು.

---------------------

ಬಡತನ ನಿವಾರಣೆಗಾಗಿ ಮೋದಿ ಕೈಗೊಂಡ ಕ್ರಮಗಳು ಐತಿಹಾಸಿಕವಾದುದು. - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ವೈಫಲ್ಯಗಳೆಲ್ಲವೂ ನಿಮ್ಮ ಮಾತನ್ನು ಅನುಮೋದಿಸುತ್ತಿವೆ.

---------------------
ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ನನಗೆ ಸೋಲಿನ ಭಯವಿಲ್ಲ. - ಯಡ್ಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಭಯವೇನಿದ್ದರೂ ಬಿಜೆಪಿಗೆ ಮಾತ್ರ.

---------------------
ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹಾಗಾಗಿ ನನ್ನ ರಾಜೀನಾಮೆಗೆ ಒತ್ತಾಯಿಸುತ್ತಲೇ ಕಾಲ ಕಳೆಯುತ್ತಾರೆ. - ಕೆ.ಜೆ.ಜಾರ್ಜ್, ಸಚಿವ

ರಾಜೀನಾಮೆ ಕೊಡುವುದಿಲ್ಲ ಎನ್ನುವುದು ಸದ್ಯಕ್ಕೆ ನಿಮ್ಮ ಕೆಲಸವಾಗಿ ಬಿಟ್ಟಿದೆ.

---------------------
 ಬಹುತೇಕರು ನನ್ನನ್ನು ಅಲೆಮಾರಿ ಎಂದು ಕರೆಯುತ್ತಾರೆ. - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಮಾರಿ ಎಂದಿರುವುದನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಬಹುಶಃ ದೇಶವ ಮಾರುವ ಕೆಲಸದಲ್ಲಿ ಮಗ್ನರಾಗಿರುವುದಕ್ಕಾಗಿರಬಹುದು.

---------------------
ಯೋಗ ಸದೃಢ ಸಮಾಜ ನಿರ್ಮಾಣಕ್ಕೆ ಸಹಾಯಕವಾಗಿದೆ. - ನರೇಂದ್ರ ಮೋದಿ, ಪ್ರಧಾನಿ.

ಆಹಾರಗಳ ಬೆಲೆ ಏರಿಕೆಗಾಗಿ ನಿಮ್ಮ ಪರ್ಯಾಯ ವ್ಯವಸ್ಥೆಯೇ?
---------------------
 ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ಕೊಡುವಂತಿದ್ದರೆ ಯಡಿಯೂರಪ್ಪರಿಗೆ ಮೊದಲು ಕೊಡಬೇಕು. - ವಿ.ಎಸ್. ಉಗ್ರಪ್ಪ, ಕಾಂಗ್ರೆಸ್ ನಾಯಕ

ವೀರಪ್ಪ ಮೊಯ್ಲಿಯವರ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ತಾತ್ಕಾಲಿಕವಾಗಿ ಕೊಟ್ಟು ಬಿಡಿ.

---------------------
ನನ್ನ ಕರ್ಮಭೂಮಿ ರಾಮನಗರ, ಅಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ. - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

ಒಟ್ಟಾರೆ ರಾಮನಗರದ ಜನರ ಕರ್ಮ.

---------------------
ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಡುವ ಮನಸ್ಸಿಲ್ಲದೆ ದ್ವಂದ್ವದಲ್ಲಿ ಸಿಲುಕಿದ್ದಾರೆ. - ಶೋಭಾ ಕರಂದ್ಲಾಜೆ, ಸಂಸದೆ.

ಕೇಂದ್ರದ ವರಿಷ್ಠರ ಶಿಕಾರಿಗೆ ಬಲಿಯಾಗಲು ಇಷ್ಟವಿಲ್ಲ.

---------------------
ಬಿಜೆಪಿಯ ದೋಷಗಳನ್ನು ಹೊತ್ತುಕೊಳ್ಳಲು ನಮ್ಮ ಪಕ್ಷ ಸಿದ್ಧವಿಲ್ಲ. - ಸಂಜಯ್ ರಾವುತ್, ಶಿವಸೇನೆ ನಾಯಕ.

ಅವರು ನಿಮ್ಮ ದೋಷಗಳನ್ನು ಹೇಳಬಹುದೆನ್ನುವ ಭಯವಿರಬೇಕು.

---------------------
ಮಾನವರೆಲ್ಲರೂ ಮೂಲತಃ ಸಸ್ಯಾಹಾರಿಗಳು. - ಮೇನಕಾ ಗಾಂಧಿ, ಕೇಂದ್ರ ಸಚಿವೆ.

ಹೀಗೆ ಮೂಲಗಳನ್ನು ಹುಡುಕುತ್ತಾ ಹೋದರೆ, ಸಂಜಯ್ ಗಾಂಧಿ ಕಾಲಿಗೆ ತೊಡರುತ್ತಾರೆ.

---------------------
ಗೋವುಗಳನ್ನು ಪೂಜಿಸುವವರು ಯಾವತ್ತೂ ಹಿಂಸೆಗೆ ಇಳಿಯುವುದಿಲ್ಲ. - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ.

ಗೋವುಗಳನ್ನು ಪೂಜಿಸುವುದಕ್ಕಾಗಿ ಯಾರೂ ಗೋವುಗಳನ್ನು ಸಾಕುವುದೂ ಇಲ್ಲ.

---------------------
 ದಲಿತರ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಬಿಜೆಪಿ ರಾಮನಾಥ್ ಕೋವಿಂದ್‌ರನ್ನು ರಾಷ್ಟ್ರಪತಿ ಮಾಡಿದೆ. - ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ.

ಬ್ರಾಹ್ಮಣರ ಮತಗಳನ್ನು ಸೆಳೆಯುವುದಕ್ಕಾಗಿ ನೀವು ಮಾಡಿದ್ದೇನು ಕಡಿಮೆಯೇ?

---------------------
ನಾವು ಕೇಂದ್ರ ಸರಕಾರದ ಗುಲಾಮ ಅಥವಾ ಸೇವಕರಲ್ಲ. - ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ.

ಅದಕ್ಕಿಂತಲೂ ಕೆಳಗಿನ ಸ್ಥಾನವೊಂದು ಇದೆಯೇ?
---------------------
ಯಡಿಯೂರಪ್ಪ ಎಲ್ಲೇ ಚುನಾವಣೆಗೆ ನಿಂತರೂ ಗೆಲ್ಲಿಸುವ ವಿಶ್ವಾಸವಿದೆ. - ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ.

ಅವರ ಎದುರಾಳಿಯನ್ನಿರಬೇಕು.

---------------------
ನಮ್ಮ ಆರ್ಥಿಕತೆ ತಲೆಕೆಳಗಾಗಿ ಗಿರಕಿ ಹೊಡೆಯುತ್ತಿದೆ. - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ.

ಇನ್ನು ಮುಂದೆ ತಲೆಕೆಳಗಾಗಿ ನಡೆಯಿರಿ ಎಂದು ಮೋದಿ ಆದೇಶ ನೀಡಲಿದ್ದಾರಂತೆ.

---------------------
ಅಮೆರಿಕದಲ್ಲಿ ರಾಹುಲ್ ವಂಶಾಡಳಿತದ ಬಗ್ಗೆ ಮಾತನಾಡಿದಾಗ ನನಗೆ ನಾಚಿಕೆ ಎನಿಸಿತು. - ಅರುಣ್ ಜೇಟ್ಲಿ, ಕೇಂದ್ರ ಸಚಿವ.

ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿರುವುದು ನಾಚಿಕೆ ತರಿಸಲಿಲ್ಲವೇ?

---------------------
 ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಗೆಲ್ಲಲು ಹಿಂದಿನ ಸರಕಾರಗಳ ವೈಫಲ್ಯವೇ ಕಾರಣ. -ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ.

ಹಿಂದಿನ ಸರಕಾರ ನಿಮ್ಮದೇ ಆಗಿತ್ತು ಎನ್ನುವುದು ನೆನಪಿದೆಯೇ?
---------------------
ದೇವರಿಗೆ ಕೋಪ ಬಂದಿರಬೇಕು ಹೀಗಾಗಿಯೇ ಮುಂಬೈಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. -ಅಮಿತಾಭ್ ಬಚ್ಚನ್, ಬಾಲಿವುಡ್ ನಟ.

ಆ ಕೋಪ ಬರಿಸುವ ವಿಧಾನವನ್ನು ಕರ್ನಾಟಕದ ಬಳ್ಳಾರಿಯ ಜನರಿಗೂ ಹೇಳಿಕೊಡಿ.

---------------------

ಮೋದಿ ಇಸ್ರೇಲ್ ಭೇಟಿ ಐತಿಹಾಸಿಕ. - ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಪ್ರಧಾನಿ.

ಹೌದು ಎಂದು ತಲೆದೂಗಿದನಂತೆ ಇತಿಹಾಸ ಪ್ರಸಿದ್ಧ ಹಿಟ್ಲರ್ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು