varthabharthi

ನಿಧನ

ಫಾತಿಮಾ ಸಾಯಿಬಿನ್

ವಾರ್ತಾ ಭಾರತಿ : 4 Oct, 2017

ಭಟ್ಕಳ, ಅ.4: ಇಲ್ಲಿನ ಆಝಾದ್ ನಗರ 1ನೆ ಕ್ರಾಸ್ ನಿವಾಸಿ, ಖ್ಯಾತ ಉದ್ಯಮಿ, ಅನಿವಾಸಿ ಭಾರತೀಯ ಡಾ.ಎಸ್.ಎಂ. ಸೈಯದ್ ಖಲೀಲ್ ಸಾಹೇಬ್ ಅವರ ಹಿರಿಯ ಸಹೋದರಿ ಫಾತಿಮಾ ಸಾಯಿಬಿನ್ (83) ಬುಧವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಆಸ್ಪತ್ರೆಯಲ್ಲೇ ನಿಧನರಾದರು ಎಂದು ತಿಳಿದು ಬಂದಿದೆ. ಗುರುವಾರ ಮಧ್ಯಾಹ್ನ ಇಲ್ಲಿನ ನವಾಯತ್ ಕಾಲನಿಯ ಮಿಲ್ಲಿಯ ಜಾಮೀಯಾ ಮಸೀದಿಯಲ್ಲಿ ಲುಹರ್ ನಮಾಝ್‌ನ ಬಳಿಕ ದಫನಕಾರ್ಯ ನಿರ್ವಹಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ಓರ್ವ ಪುತ್ರಿ, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)