varthabharthi

ಸಿನಿಮಾ

ನಾಲ್ಕು ಭಾಷೆಗಳಲ್ಲಿ 'ನಿತ್ಯಾ' ಚಿತ್ರ

ವಾರ್ತಾ ಭಾರತಿ : 6 Oct, 2017

ಕಳೆದ ಕೆಲವು ಸಮಯಗಳಿಂದ ಚಿತ್ರರಂಗದಲ್ಲಿ ತುಸು ಮಂಕಾಗಿರುವಂತೆ ಕಂಡುಬಂದಿರುವ ನಿತ್ಯಾ ಮೆನನ್‌ಗೆ ತನ್ನ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ನೀಡಿದ್ದಾರೆ. ಆಕೆ ನಾಯಕಿಯಾಗಿ ಅಭಿನಯಿಸಲಿರುವ ‘ಪ್ರಾಣ’ ಚಿತ್ರ ಮಲಯಾಳಂ, ಹಿಂದಿ, ತಮಿಳು, ತೆಲುಗುಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದೆ.

2016ರಲ್ಲಿ ‘ಜನತಾಗ್ಯಾರೇಜ್’ ಹಾಗೂ ಸ್ಯಾಂಡಲ್‌ವುಡ್ ಚಿತ್ರ ‘ಕೋಟಿಗೊಬ್ಬ 2’ ಸೇರಿದಂತೆ ಐದು ಚಿತ್ರಗಳಲ್ಲಿ ನಿತ್ಯಾ ನಟಿಸಿದ್ದರು. ಅಷ್ಟೇ ಅಲ್ಲ, ಈ ಐದೂ ಚಿತ್ರಗಳು ಗಳಿಕೆಯಲ್ಲಿ ಪರವಾಗಿಲ್ಲ ಎನಿಸಿಕೊಂಡಿದ್ದವು. ಆದರೆ ಈ ವರ್ಷ ಮಾತ್ರ ಆಕೆಯ ಅಭಿನಯದ ಯಾವುದೇ ಚಿತ್ರವೂ ತೆರೆಕಂಡಿಲ್ಲ.

ವಿ.ಕೆ. ಪ್ರಕಾಶ್ ನಿರ್ದೇಶನದ ‘ಪ್ರಾಣ’ ಚಿತ್ರಕ್ಕೆ ಭಾರತದ ಹೆಸರಾಂತ ಛಾಯಾಗ್ರಾಹಕ ಪಿ.ಸಿ. ಶ್ರೀರಾಮ್ ಕ್ಯಾಮರಾ ಹಿಡಿಯಲಿದ್ದಾರೆ. ‘ನಾಯಕನ್’, ‘ಅಗ್ನಿನಕ್ಷತ್ರಂ’ ಸೇರಿದಂತೆ ಹಲವಾರು ಚಿತ್ರಗಳಿಗೆ ಛಾಯಾಗ್ರಾಹಕರಾಗಿರುವ ಪಿ.ಸಿ.ಶ್ರೀರಾಮ್ ಈ ಚಿತ್ರದಲ್ಲಿ ತನ್ನ ಕ್ಯಾಮರಾ ಚಮತ್ಕಾರ ತೋರಿಸಲಿದ್ದಾರೆ. ಆಸ್ಕರ್ ಪುರಸ್ಕೃತ ರಸೂಲ್ ಪೂಕುಟ್ಟಿ ಈ ಚಿತ್ರದ ಸೌಂಡ್‌ಎಫೆಕ್ಟ್ಸ್‌ನಿರ್ವಹಿಸಲಿದ್ದಾರೆ. ಹಾಗೆ ನೋಡಿದರೆ ನಿತ್ಯಾ ಮೆನನ್ ಪ್ರಕಾಶ್ ಅಭಿನಯದ ನಿರ್ದೇಶನದಲ್ಲಿ ನಟಿಸುತ್ತಿರುವುದು ಇದು ಮೊದಲೇನಲ್ಲ. ನಿತ್ಯಾ ಅಭಿನಯದ ಮಲಯಾಳಂ ಚಿತ್ರ ‘ಕರ್ಮಯೋಗಿ ಪಾಪಿನ್ಸ್’ಗೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದರು.

ವಿಜಯ್ ಅಭಿನಯದ ನೂತನ ಚಿತ್ರ ‘ಮೆರ್ಸಾಲ್’ ನಲ್ಲಿ ನಿತ್ಯಾ ನಾಯಕಿಯಾಗಿದ್ದು, ಚಿತ್ರ ಡಿಸೆಂಬರ್ ವೇಳೆಗೆ ಬಿಡುಗಡೆ ಗೊಳ್ಳುವ ನಿರೀಕ್ಷೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)