varthabharthi

ಸಿನಿಮಾ

ರಾಷ್ಟ್ರಪ್ರಶಸ್ತಿ ವಿಜೇತ ಬಾಲಿವುಡ್ ನಿರ್ದೇಶಕ ಕುಂದನ್ ಶಾ ನಿಧನ

ವಾರ್ತಾ ಭಾರತಿ : 7 Oct, 2017

ಹೊಸದಿಲ್ಲಿ, ಅ.7: ‘ಜಾನೆ ಭಿ ದೊ ಯಾರೋನ್’ ಹಾಗು ‘ಕಭಿ ಹಾ ಕಬೀ ನಾ’ದಂತಹ ಪ್ರಸಿದ್ಧ ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ವಿಜೇತ ಕುಂದನ್ ಶಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶನಿವಾರ ಮುಂಬೈನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರಗಳನ್ನಷ್ಟೇ ಅಲ್ಲದೆ ಶಾ ‘ಯೆ ಜೋ ಹೈ ಝಿಂದಗಿ’, ‘ವಗ್ಲೆ ಕಿ ದುನಿಯಾ’ ಸೇರಿದಂತೆ ಹಲವು ಟಿವಿ ಸೀರಿಸ್ ಗಳನ್ನು ನಿರ್ದೇಶಿಸಿದ್ದಾರೆ. 1983ರಲ್ಲಿ ಬಿಡುಗಡೆಯಾದ ‘ಜಾನೆ ಭಿ ದೊ ಯಾರೋನ್’ ಅವರ ಕೆರಿಯರ್ ನಲ್ಲೇ ಅತ್ಯುತ್ತಮ ಚಿತ್ರವಾಗಿತ್ತು. ಬಾಲಿವುಡ್ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು ಇಂದಿಗೂ ‘ಜಾನೆ ಭಿ ದೊ ಯಾರೋನ್’ ಗುರುತಿಸಲ್ಪಡುತ್ತದೆ.  ಈ ಚಿತ್ರಕ್ಕಾಗಿ ಶಾ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)