varthabharthi

ಸಿನಿಮಾ

ವಿಡಿಯೋ ವೈರಲ್

ಐಸ್ ಕ್ರೀಮ್ ವ್ಯಾಪಾರಿಯ ಕೈಚಳಕಕ್ಕೆ ದಂಗಾದ ‘ದಂಗಲ್’ ಹೀರೊ

ವಾರ್ತಾ ಭಾರತಿ : 9 Oct, 2017

ಬಾಲಿವುಡ್ ನಟ ಆಮಿರ್ ಖಾನ್ ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದೇ ಹೆಸರುವಾಸಿಯಾದವರು. ನಟನೆಯಿರಲಿ, ಮಾತುಗಳಿರಲಿ, ಸಾಮಾಜಿಕ ಕಳಕಳಿಯಿರಲಿ ಈ ನಟನದ್ದು ಎತ್ತಿದ ಕೈ. ಆದರೆ ಐಸ್ ಕ್ರೀಮ್ ಮಾರಾಟಗಾರನೊಬ್ಬನ ಚಾಕಚಕ್ಯತೆಗೆ ಸ್ವತಃ ಮಿ.ಪರ್ಫೆಕ್ಶನಿಸ್ಟ್ ತಲೆದೂಗಿದ್ದಾರೆ.

ತುರ್ಕಿಶ್ ಐಸ್ ಕ್ರೀಮ್ ವ್ಯಾಪಾರೊಯೊಬ್ಬನ ಕೈಚಳಕದ ವಿಡಿಯೋವನ್ನು ಆಮಿರ್ ಖಾನ್ ಇತ್ತೀಚೆಗಷ್ಟೇ ಫೇಸ್ಬುಕ್ ಹಾಗು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈಗಾಗಲೆ ಈ ವಿಡಿಯೋಗೆ 1 ಲಕ್ಷ ಲೈಕ್ ಗಳು ಸಿಕ್ಕಿದ್ದು, ಟ್ವಿಟ್ಟರ್ ನಲ್ಲಿ 20 ಸಾವಿರ ಬಾರಿ ರಿಟ್ವೀಟ್ ಆಗಿದೆ.

ಐಸ್ ಕ್ರೀಮ್ ಕೊಳ್ಳುವ ಆಮಿರ್ ರನ್ನು ತನ್ನ ಚಾಕಚಕ್ಯತೆಯಿಂದ ವಂಚಿಸುವ ವ್ಯಾಪಾರಿಯನ್ನು ಆಮಿರ್ ಪ್ರಶಂಸಿಸಿದ್ದಾರೆ. 

 

Comments (Click here to Expand)