varthabharthi

ನಿಧನ

ಅಬ್ಬಾಸ್ ಬಸ್ತಿಕ್ಕಾರ್

ವಾರ್ತಾ ಭಾರತಿ : 9 Oct, 2017

ಉಪ್ಪಿನಂಗಡಿ, ಅ. 9: ಇಲ್ಲಿನ ಪ್ರತಿಷ್ಠಿತ ಬಸ್ತಿಕ್ಕಾರ್ ಮನೆತನದ ಅಬ್ಬಾಸ್ ಬಸ್ತಿಕ್ಕಾರ್ ಸೋಮವಾರ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದ ಇವರು ಸತತವಾಗಿ ಆರು ಬಾರಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ಕಳೆದ ಬಾರಿ ಮಾತ್ರ ಕ್ಷೇತ್ರ ಬದಲಾವಣೆಯಿಂದ ಕೆಲವೇ ಕೆಲವು ಮತಗಳ ಅಂತರದಿಂದ ಪರಾಭವ ಹೊಂದಿದ್ದರು.

 

Comments (Click here to Expand)