varthabharthi

ನಿಧನ

ಡಾ.ಎಂ.ಜಿ.ಭಟ್

ವಾರ್ತಾ ಭಾರತಿ : 9 Oct, 2017

ಬಂಟ್ವಾಳ, ಅ. 9: ಭಾರತೀಯ ದಂತವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ, ರಾಜ್ಯ ಶಾಖೆಯ ಮಾಜಿ ಅಧ್ಯಕ್ಷರೂ ಆಗಿದ್ದ ಬಂಟ್ವಾಳ ತಾಲೂಕು ಮಿತ್ತೂರು ಮನೆತನದ ಕರ್ಗಲ್ಲು ನಿವಾಸಿ ಡಾ. ಎಂ.ಗೋಪಾಲಕೃಷ್ಣ ಭಟ್ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರಿಗೆ 66ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ.

ಬಿ.ಸಿ.ರೋಡಿನಲ್ಲಿ 1974ರಿಂದ ದಂತವೈದ್ಯರಾಗಿ ವೃತ್ತಿಜೀವನ ಆರಂಭಿಸಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಂತವೈದ್ಯರ ಸಂಘ ಸ್ಥಾಪನೆ, ಏಳಿಗೆಗಾಗಿ ಶ್ರಮಿಸಿದ್ದರು. ಪುತ್ತೂರಿನ ಐಡಿಎ ಶಾಖೆಯ ಸ್ಥಾಪಕ ಅಧ್ಯಕ್ಷರಾಗಿ ಹಾಗೂ ಬಂಟ್ವಾಳದಲ್ಲಿ ಎರಡು ಬಾರಿ ರಾಜ್ಯಮಟ್ಟದ ದಂತವೈದ್ಯರ ಸಮಾವೇಶವನ್ನು ನಡೆಸಿದ್ದರು. ಭಟ್ ನಿಧನಕ್ಕೆ ಐಡಿಎ ಪದಾಧಿಕಾರಿಗಳಾದ ಡಾ.ರಾಜೇಂದ್ರಪ್ರಸಾದ್, ಡಾ.ಮುರಳಿಮೋಹನ ಚೂಂತಾರು, ಡಾ.ಕೃಷ್ಣಪ್ರಸಾದ್, ಡಾ.ರಾಘವೇಂದ್ರ ಪಿದಮಲೆ, ಡಾ. ಚರಣ್ ಕಜೆ ಸಹಿತ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

 

Comments (Click here to Expand)