varthabharthi

ಸಿನಿಮಾ

ಭಾರತದ ಈ ಸುಪ್ರಸಿದ್ಧ ನಟನ ಭದ್ರತೆಗೆ ದೇಶದ ಅರ್ಧ ವಾಯುಪಡೆಯನ್ನೇ ನಿಯೋಜಿಸಿತ್ತು ಅಫ್ಘಾನಿಸ್ಥಾನ!

ವಾರ್ತಾ ಭಾರತಿ : 11 Oct, 2017

ರಾಜಕಾರಣಿಗಳು ಇತರ ದೇಶಗಳಿಗೆ ಭೇಟಿ ನೀಡಿದಾಗ ಭದ್ರತೆ ಒದಗಿಸುವುದು ಸಾಮಾನ್ಯ ವಿಚಾರ. ಆದರೆ ನಟನೊಬ್ಬನಿಗೆ ಭಾರೀ ಭದ್ರತೆಯನ್ನು ಒದಗಿಸುವುದು ತುಸು ಅಪರೂಪವೇ. ಅದೂ ಕೂಡ ದೇಶದ ಅರ್ಧ ವಾಯುಪಡೆಯನ್ನು ನೀಡುವುದು ದಾಖಲೆಯೇ ಸರಿ.

ಅಫ್ಘಾನಿಸ್ಥಾನ ಸರಕಾರವು ಬಾಲಿವುಡ್ ನಟರೊಬ್ಬರಿಗೆ ಈ ರೀತಿಯ ಭದ್ರತೆಯನ್ನು ಒದಗಿಸಿತ್ತು ಎಂದರೆ ನಂಬಲೇಬೇಕು. ಆ ನಟ ಬೇರ್ಯಾರೂ ಅಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್.

1992ರಲ್ಲಿ ‘ಖುದಾ ಗವಾ’ ಚಿತ್ರದ ಶೂಟಿಂಗ್ ಅಫ್ಘಾನಿಸ್ಥಾನದಲ್ಲಿ ನಡೆದಿತ್ತು. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಾಯಕನಟರಾಗಿದ್ದರು. 1992ರ ಸಂದರ್ಭ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ನಜೀಬುಲ್ಲಾ ಅಹ್ಮದ್ ಝಾಯಿ ಅಮಿತಾಬ್ ಅವರ ಭದ್ರತೆಗಾಗಿ ದೇಶದ ಅರ್ಧ ವಾಯುಪಡೆಯನ್ನೇ ನಿಯೋಜಿಸಿದ್ದರು.

ಅಫ್ಘಾನಿಸ್ತಾನದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರವಾಗಿ ‘ಖುದಾ ಗವಾ’ ದಾಖಲೆ ಬರೆದಿತ್ತು. ಪೌರಾಣಿಕ ಕಥಾವಸ್ತುವನ್ನು ಹೊಂದಿದ್ದ ಈ ಚಿತ್ರವನ್ನು ಮುಕುಲ್ ಎಸ್. ಆನಂದ್ ನಿರ್ದೇಶಿಸಿದ್ದರು. ಅಮಿತಾಬ್ ಜೊತೆಗೆ ಈ ಚಿತ್ರದಲ್ಲಿ ಶ್ರೀ ದೇವಿ, ನಾಗಾರ್ಜುನ, ಶಿಲ್ಪಾ ಶಿರೋಡ್ಕರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)