varthabharthi

ಗಲ್ಫ್ ಸುದ್ದಿ

ಸೌದಿ: ಶಾಲೆಗೆ ಬಡಿದ ಹೌದಿ ಬಂಡುಕೋರರ ಕ್ಷಿಪಣಿ

ವಾರ್ತಾ ಭಾರತಿ : 11 Oct, 2017

ಜಿದ್ದಾ (ಸೌದಿ ಅರೇಬಿಯ), ಅ. 11: ಯಮನ್‌ನ ಹೌದಿ ಬಂಡುಕೋರರು ಹಾರಿಸಿದ ಕ್ಷಿಪಣಿಯೊಂದು ಸೌದಿ ಅರೇಬಿಯದ ಜಝನ್ ವಲಯದ ಅಲ್-ಜರಾದಿಯಾ ಗ್ರಾಮದಲ್ಲಿರುವ ಶಾಲೆಯೊಂದಕ್ಕೆ ಬಡಿದಿದೆ ಎಂದು ಅರಬ್ ಮೈತ್ರಿಕೂಟದ ಮೂಲವೊಂದು ತಿಳಿಸಿದೆ.

ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕ್ಷಿಪಣಿ ಬಡಿದು ಶಾಲೆಗೆ ಹಾನಿಯಾಗಿದೆ, ಅದರ ಅಂಗಣದಲ್ಲಿ ಕುಳಿ ಬಿದ್ದಿದೆ ಹಾಗೂ ಕೆಲವು ನಾಗರಿಕರ ಸೊತ್ತುಗಳೂ ಹಾನಿಗೀಡಾಗಿವೆ.

2015ರಿಂದ ಯಮನ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ಯಮನ್ ಸರಕಾರದ ಪರವಾಗಿ ಸೌದಿ ಅರೇಬಿಯ ನೇತೃತ್ವದ ಅರಬ್ ಮೈತ್ರಿಕೂಟವು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದೆ.

 

Comments (Click here to Expand)