varthabharthi

ಕ್ರೀಡೆ

ಅಂತರಾಷ್ಟ್ರೀಯ ಫುಟ್ಬಾಲ್ ನಿಂದ ಪಾಕ್ ಗೆ ನಿಷೇಧ

ವಾರ್ತಾ ಭಾರತಿ : 12 Oct, 2017

ಕರಾಚಿ, ಅ. 11: ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ಪಾಕಿಸ್ತಾನ ಫುಟ್ಬಾಲ್ ಸಂಸ್ಥೆ ಪಿಎಫ್‌ಎಫ್‌ನ್ನು ಫಿಫಾ ನಿಷೇಧಿಸಿದೆ.

ಮೂರನೆ ವ್ಯಕ್ತಿ ಪಾಕಿಸ್ತಾನ ಫುಟ್ಬಾಲ್ ಸಂಸ್ಥೆಯನ್ನು ನಿಯಂತ್ರಣದಲ್ಲಿಟ್ಟಿರುವ ಹಿನ್ನೆಲೆಯಲ್ಲಿ ಫಿಫಾ ಈ ನಿರ್ಧಾರ ಕೈಗೊಂಡಿದೆ.

 ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್(ಪಿಎಫ್‌ಎಫ್) ನ್ಯಾಯಾಲಯ ನೇಮಕಗೊಳಿಸಿದ ಆಡಳಿತಾಧಿಕಾರಿಯ ನಿಯಂತ್ರಣದಲ್ಲಿದೆ. ಫಿಫಾ ನಿಯಮ ಪ್ರಕಾರ ಫಿಫಾದ ಅಧೀನಕ್ಕೊಳಪಟ್ಟಿರುವ ವಿವಿಧ ದೇಶಗಳ ಫುಟ್ಬಾಲ್ ಸಂಸ್ಥೆಯ ಆಡಳಿತದಲ್ಲಿ ಮೂರನೆ ವ್ಯಕ್ತಿ (ಥರ್ಡ್ ಪಾರ್ಟಿ) ಹಸ್ತಕ್ಷೇಪ ಮಾಡುವಂತಿಲ್ಲ. ಪಾಕಿಸ್ತಾನ ಫುಟ್ಬಾಲ್ ಸಂಸ್ಥೆಯು ನ್ಯಾಯಾಲಯದಿಂದ ನೇಮಕಗೊಂಡ ಆಡಳಿತಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟಿರುವ ಹಿನ್ನೆಲೆಯಲ್ಲಿ ಪಿಎಫ್‌ಎಫ್ ಸಮಿತಿಯು ತನ್ನ ಅಸ್ತಿತ್ವ್ವವನ್ನು ಕಳೆದುಕೊಂಡಿದೆ ಎಂದು ಫಿಫಾ ಅಭಿಪ್ರಾಯಪಟ್ಟಿದೆ.

 ನಿಷೇಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ಫುಟ್ಬಾಲ್ ತಂಡ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದೆ. ಫಿಫಾದ ಅಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳಲ್ಲ್ಲೂ ಪಾಕಿಸ್ತಾನದ ಫುಟ್ಬಾಲ್ ಸಂಸ್ಥೆ ಭಾಗವಹಿಸುವಂತಿಲ್ಲ.

 

Comments (Click here to Expand)