varthabharthi

ರಾಷ್ಟ್ರೀಯ

ಹಿಮಾಚಲ ಪ್ರದೇಶದಲ್ಲಿ ನ.9 ರಂದು, ಡಿ.18ಕ್ಕಿಂತ ಮೊದಲು ಗುಜರಾತ್ ನಲ್ಲಿ ಅಸೆಂಬ್ಲಿ ಚುನಾವಣೆ

ವಾರ್ತಾ ಭಾರತಿ : 12 Oct, 2017

ಹೊಸದಿಲ್ಲಿ, ಅ.12: ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ ನ.9 ರಂದು ನಡೆಯಲಿದ್ದು, ಡಿ.18 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಘೋಷಣೆ ಮಾಡಿದೆ.

  68 ಸದಸ್ಯ ಬಲದ ಹಿಮಾಚಲ ಪ್ರದೇಶ ಸದನದ ಅಧಿಕಾರದ ಅವಧಿ 2018ರ ಜನವರಿ 7ಕ್ಕೆ ಕೊನೆಗೊಳ್ಳಲಿದೆ.

‘‘ಹಿಮಾಚಲ ಪ್ರದೇಶದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಅ.23 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇದೇ ಮೊದಲ ಬಾರಿ 136 ಮತಗಟ್ಟೆಗಳಲ್ಲಿ ಮಹಿಳೆಯರು ಮಾತ್ರ ಕಾರ್ಯನಿರ್ವಹಿಸಲಿದ್ದಾರೆ. ಮತದಾನದಲ್ಲಿ ಪಾರದರ್ಶಕತೆ ತರಲು ವಿವಿಪಿಎಟಿ ನೂತನ ಯಾಂತ್ರಿಕ ವ್ಯವಸ್ಥೆಯಾಗಿದೆ’’ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜ್ಯೋತಿ ಹೇಳಿದ್ದಾರೆ.

 ಗುಜರಾತ್ ಅಸೆಂಬ್ಲಿ ಅವಧಿಯು 2018ರ ಜನವರಿ 22 ರಂದು ಮುಗಿಯಲಿರುವ ಹಿನ್ನೆಲೆಯಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ಡಿ.18ಕ್ಕಿಂತ ಮೊದಲೇ ನಡೆಯಲಿದೆ. ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

 182 ಸದಸ್ಯ ಬಲದ ಗುಜರಾತ್ ಸದನದಲ್ಲಿ 118 ಬಿಜೆಪಿ ಶಾಸಕರು, 42 ಕಾಂಗ್ರೆಸ್ ಶಾಸಕರು, ಎರಡು ಎನ್‌ಸಿಪಿ ಹಾಗೂ ಒಂದು ಜೆಡಿಯು ಶಾಸಕರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)