varthabharthi

ರಾಷ್ಟ್ರೀಯ

ಶಿವಸೇನೆ ನಾಯಕನ ಕಾರು ಢಿಕ್ಕಿ: ಇಬ್ಬರು ಬಾಲಕಿಯರು ಮೃತ್ಯು

ವಾರ್ತಾ ಭಾರತಿ : 12 Oct, 2017

ಬಾರಾಮತಿ, ಅ. 12: ಗುದ್ದೋಡು ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವಸೇನೆ ನಾಯಕನ ಕಾರು ಮೂವರು ಬಾಲಕಿಯರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಬಾರಾಮತಿ ಶಿವಸೇನೆಯ ಶಾಖಾ ಪ್ರಮುಖ್ ಪಪ್ಪು ಮಾನೆ ಮೂವರು ಶಾಲಾ ವಿದ್ಯಾರ್ಥಿಗಳಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಅವರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟರು. ಓರ್ವ ವಿದ್ಯಾರ್ಥಿನಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  ಈ ಘಟನೆ ಬಾರಾಮತಿ-ಮೊರ್ಗಾಂವ್ ರಸ್ತೆಯಲ್ಲಿ ಸಂಭವಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಪಪ್ಪು ಮಾನೆ ಪರಾರಿಯಾಗಿದ್ದಾನೆ. ಉದ್ರಿಕ್ತ ಜನರ ಗುಂಪು ಕಾರಿಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)