varthabharthi

ರಾಷ್ಟ್ರೀಯ

ಜ್ಯೋತಿರಾದಿತ್ಯ ಸಿಂಧ್ಯಾ ಕಾರ್ಯಕ್ರಮ ಆಯೋಜನೆ: ಕಾಲೇಜು ಪ್ರಾಂಶುಪಾಲರ ಅಮಾನತು

ವಾರ್ತಾ ಭಾರತಿ : 12 Oct, 2017

ಭೋಪಾಲ್, ಅ. 12: ಸ್ಥಳೀಯ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದ್ಯಾ ಅವರ ಕಾರ್ಯಕ್ರಮ ಏರ್ಪಡಿಸಿದ ಆರೋಪದಲ್ಲಿ ಅಶೋಕ್ ನಗರ್ ಜಿಲ್ಲೆಯ ಗಣೇಶ್ ಶಂಕರ್ ವಿದ್ಯಾರ್ಥಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಲ್. ಅಹಿವಾರ್ ಅವರನ್ನು ಮಧ್ಯಪ್ರದೇಶ ಸರಕಾರ ಅಮಾನತುಗೊಳಿಸಿದೆ.

 ಮಂಗಳವಾರ ಸಿಂದ್ಯಾ ಅವರು ಕಾಲೇಜು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು ಹಾಗೂ ಪ್ರಾಂಶುಪಾಲರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಸಿಂದ್ಯಾ ವ್ಯಾಪಂ ಹಗರಣದ ಬಗ್ಗೆ ಉಲ್ಲೇಖ ಮಾಡಿದ್ದರು.

 

Comments (Click here to Expand)