varthabharthi

ಬೆಂಗಳೂರು

ಅ.13ರಂದು ಕೊಲಿಜಿಯಂನ ದ್ವಂದ್ವ, ಸ್ವತಂತ್ರ ನ್ಯಾಯಾಂಗ ಕುರಿತು ವಿಚಾರ ಸಂಕಿರಣ

ವಾರ್ತಾ ಭಾರತಿ : 12 Oct, 2017

ಬೆಂಗಳೂರು, ಅ.12: ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಕೊಲಿಜಿಯಂನ ದ್ವಂದ್ವಗಳು ಮತ್ತು ಸ್ವತಂತ್ರ ನ್ಯಾಯಾಂಗ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಅ.13ರ ಶುಕ್ರವಾರ ಸಂಜೆ 4.30ಕ್ಕೆ ಹೈಕೋರ್ಟ್‌ನ ಸಭಾಂಗಣದಲ್ಲಿ ನಡೆಯಲಿದೆ.

ವಿಚಾರ ಸಂಕಿರಣ ಕುರಿತು ಗುಜರಾತ್ ಹೈಕೋರ್ಟ್‌ನ ಹಿರಿಯ ವಕೀಲ ಯತಿನ್ ಓಜಾ ಹಾಗೂ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೊಂದಿ ಉಪನ್ಯಾಸ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಅಡ್ವೊಕೇಟ್ ಜನರಲ್ ರವಿ ವರ್ಮಕುಮಾರ್, ಹೈಕೋರ್ಟ್ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು, ಖಜಾಂಚಿ ಎಚ್.ವಿ.ಪ್ರವೀಣ್, ಪುಟ್ಟೆಗೌಡ, ಎಸ್.ರಾಜು, ಬಿ.ಟಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)