varthabharthi

ಗಲ್ಫ್ ಸುದ್ದಿ

ತುರ್ತು ಸಂದರ್ಭಗಳಲ್ಲಿ ಚಿಂತೆ ಬೇಡ

ರಕ್ಷಣೆಗಾಗಿ ‘ಹಾರುವ ಬೈಕ್’ನಲ್ಲಿ ಆಗಮಿಸುತ್ತಾರೆ ದುಬೈ ಪೊಲೀಸರು!

ವಾರ್ತಾ ಭಾರತಿ : 12 Oct, 2017

ದುಬೈ, ಅ.12: ಸಾಮಾನ್ಯವಾಗಿ ಪೊಲೀಸರು ಕಾರುಗಳಲ್ಲಿ, ಜೀಪ್ ಗಳಲ್ಲಿ ಹಾಗು ಬೈಕ್ ಗಳಲ್ಲಿ ಹೋಗುವುದನ್ನು ನೋಡಿದ್ದೇವೆ. ಆದರೆ ದುಬೈ ಪೊಲೀಸರು ಇವೆಲ್ಲದಕ್ಕಿಂತ ಭಿನ್ನವಾಗಿ ಹಾರುವ ಮೋಟಾರ್ ಬೈಕ್  ನಲ್ಲಿ ಸುತ್ತುವ ಮೂಲಕ ಗಮನಸೆಳೆದಿದ್ದಾರೆ.

ಈ ‘ಹೋವರ್ ಬೈಕ್’’ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಸುತ್ತುವ ವಿಡಿಯೋವೊಂದು ವೈರಲ್ ಆಗುತ್ತಿದೆ. ರಷ್ಯಾದ ‘ಹೋವರ್ ಸರ್ಫ್’’ ಕಂಪೆನಿ ತಯಾರಿಸಿರುವ ಈ ಹಾರುವ ಬೈಕ್  ನೆಲದಿಂದ 16 ಅಡಿ ಎತ್ತರಕ್ಕೆ ಹಾರಲಿದೆ. ಸುಮಾರು 25 ನಿಮಿಷಗಳ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಈ ವಿಶೇಷ ಬೈಕ್ ಗಳನ್ನು ತುರ್ತು ಸಂದರ್ಭಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಗಾಗಿ ಬಳಸಲಾಗುತ್ತದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)