varthabharthi

ರಾಷ್ಟ್ರೀಯ

ಶಂಕಿತ ಐಎಸ್‌ಐ ಏಜೆಂಟ್ ಬಂಧನ

ವಾರ್ತಾ ಭಾರತಿ : 12 Oct, 2017

ಚಂಡಿಗಢ, ಅ. 12: ಪಾಕಿಸ್ತಾನದ ಮಾಜಿ ಪ್ರಜೆ ಹಾಗೂ ಜಲಂದರ್‌ನ ಅಂತರ್ ಸೇವಾ ಬೇಹುಗಾರಿಕೆ (ಐಎಸ್‌ಐ)ಯ ಶಂಕಿತ ಏಜೆಂಟ್ ಎಹ್ಸಾನ್ ಉಲ್ ಹಕ್ ನನ್ನು ಪಂಜಾಬ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

 ಎಹ್ಸಾನ್ ಉಲ್ ಹಕ್ಕ್ ಪ್ರಸ್ತುತ ಆಸ್ಟೇಲಿಯಾದ ಪ್ರಜೆ. ಜಲಂಧರ್ ಪೊಲೀಸ್‌ನ ವಿಶೇಷ ಕಾರ್ಯಾಚರಣೆ ಘಟಕ ಜಂಟಿ ಕಾರ್ಯಾಚರಣೆ ನಡೆಸಿ ಎಹ್ಸಾನ್ ಉಲ್ ಹಕ್ಕ್‌ನನ್ನು ಬಂಧಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಜಲಾಂಧರ್ ಸಮೀಪದ ಅಲಿಪುರ ಈತನ ಊರು. ಪಾಕಿಸ್ತಾನದ ನಾಂಕಾನಾ ಸಾಹೀಬ್ ಸಮೀಪದ ಸರ್ಜಾ ಗ್ರಾಮ ಈತನ ಹುಟ್ಟೂರು ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಐಎಸ್‌ಐ ಎಜೆಂಟ್ ಆಗಿದ್ದು, ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)