varthabharthi

ರಾಷ್ಟ್ರೀಯ

ಮೊಬೈಲ್ ನೀಡಲು ನಿರಾಕರಣೆ: ಆತ್ಮಹತ್ಯೆಗೆ ಶರಣಾದ ಬಾಲಕಿ

ವಾರ್ತಾ ಭಾರತಿ : 12 Oct, 2017

ಪಣಜಿ, ಅ. 12: ತಂದೆ ಮೊಬೈಲ್ ಖರೀದಿಸಿ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾದ ಘಟನೆ ಇಂದಿಲ್ಲಿ ನಡೆದಿದೆ.

ಇಲ್ಲಿಂದ 45 ಕಿ.ಮೀ. ದೂರದಲ್ಲಿರುವ ಸಂಖಾಲಿಂ ಗ್ರಾಮದಲ್ಲಿರುವ ಮನೆಯಲ್ಲಿ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂದರ್ಭ ತಾಯಿ ಸ್ನಾನಗೃಹದಲ್ಲಿದ್ದರು. ತಂದೆ ಹಿರಿಯ ಸಹೋದರಿಯನ್ನು ಕಾಲೇಜಿಗೆ ಬಿಡಲು ತೆರಳಿದ್ದರು ಎಂದು ಬಿಕೋಲಿಮ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಯಿ ಸ್ನಾನಗೃಹದಿಂದ ಹೊರಬಂದಾಗ ಪುತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಂಡು ಬಂತು. ಅವರು ಬೆಂಕಿ ನಂದಿಸಿ ಕೂಡಲೇ ಪುತ್ರಿಯನ್ನು ಸಂಖಾಲಿಂನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಮೊಬೈಲ್ ಖರೀದಿಸಿ ನೀಡದ ಹಿನ್ನೆಲೆಯಲ್ಲಿ ಬಾಲಕಿ ಖಿನ್ನಳಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Comments (Click here to Expand)