varthabharthi

ಅಂತಾರಾಷ್ಟ್ರೀಯ

ಇಮ್ರಾನ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್

ವಾರ್ತಾ ಭಾರತಿ : 12 Oct, 2017

ಇಸ್ಲಾಮಾಬಾದ್, ಅ. 12: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನ ಚುನಾವಣಾ ಆಯೋಗ (ಇಸಿಪಿ) ಗುರುವಾರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ.

 ವಿಚಾರಣೆಗೆ ಪದೇ ಪದೇ ಗೈರುಹಾಜರಾಗಿರುವುದು ಹಾಗೂ ಗೈರುಹಾಜರಿಗಾಗಿ ಕ್ಷಮೆ ಕೋರುವ ಲಿಖಿತ ಪತ್ರವನ್ನು ಕಳುಹಿಸಲು ವಿಫಲವಾಗಿರುವುದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇಮ್ರಾನ್‌ರನ್ನು ಬಂಧಿಸಿ, ಪಿಟಿಐ ಭಿನ್ನಮತೀಯ ಹಾಗೂ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಓರ್ವರಾಗಿರುವ ಅಕ್ಬರ್ ಎಸ್. ಬಾಬರ್ ದಾಖಲಿಸಿರುವ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ 26ರಂದು ನ್ಯಾಯಾಲಯದಲ್ಲಿ ಹಾಜರುಪಡಿಸಿ ಎಂದು ಆಯೋಗ ಆದೇಶ ನೀಡಿದೆ.

 

Comments (Click here to Expand)