varthabharthi

ಅಂತಾರಾಷ್ಟ್ರೀಯ

ಎನ್‌ಬಿಸಿ ಮತ್ತು ಇತರ ಸುದ್ದಿ ಚಾನೆಲ್‌ಗಳ ಪರವಾನಿಗೆ ಪ್ರಶ್ನಿಸುವೆ: ಟ್ರಂಪ್

ವಾರ್ತಾ ಭಾರತಿ : 12 Oct, 2017

ವಾಶಿಂಗ್ಟನ್, ಅ. 12: ‘ಸುಳ್ಳು ಸುದ್ದಿ’ಗಳನ್ನು ಪ್ರಸಾರ ಮಾಡುತ್ತಿರುವ ಎನ್‌ಬಿಸಿ ಮತ್ತು ಇತರ ಸುದ್ದಿ ಚಾನೆಲ್‌ಗಳ ಪರವಾನಿಗೆಗಳನ್ನು ಪ್ರಶ್ನಿಸಲಾಗುವುದು ಎಂಬ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್, ಟ್ರಂಪ್‌ರನ್ನು ‘ದಡ್ಡ’ ಎಂಬುದಾಗಿ ಕರೆದಿದ್ದಾರೆ ಎಂಬುದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

‘‘ಎನ್‌ಬಿಸಿ ಮತ್ತು ಇತರ ಚಾನೆಲ್‌ಗಳಿಂದ ಸುಳ್ಳು ಸುದ್ದಿಗಳು ಹೊರಬರುತ್ತಿದ್ದು, ಅವುಗಳ ಪರವಾನಿಗೆಯನ್ನು ಪ್ರಶ್ನಿಸಲು ಯಾವ ಸಮಯ ಸೂಕ್ತ? ಇದು ದೇಶಕ್ಕೆ ಕೆಟ್ಟದು!’’ ಎಂದು ಟ್ರಂಪ್ ಬುಧವಾರ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)