varthabharthi

ಕರಾವಳಿ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ವಾರ್ತಾ ಭಾರತಿ : 12 Oct, 2017

ಮಂಗಳೂರು, ಅ.12: ಡೈರಿಗೆ ಹಾಲು ಹಾಕಿ ಮನೆಗೆ ಮರಳುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿ, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕುಪ್ಪೆಪದವು ಸಮೀಪದ ಮುಹಮ್ಮದ್ ಫೈಝಲ್ (37) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಬಾಲಕಿ ಅ.10ರಂದು ಬೆಳಗ್ಗೆ ಡೈರಿಗೆ ಹಾಲು ಹಾಕಿ ಮರಳಿ ಮನೆಗೆ ತೆರಳುತ್ತಿರುವಾಗ, ಆರೋಪಿ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪತ್ತೆ ಕಾರ್ಯ ನಡೆಸಿದ ಪೊಲೀಸರು ಗುರುವಾರ ಆರೋಪಿಯನ್ನು ಕುಪ್ಪೆಪದವಿನಲ್ಲಿ ಬಂಧಿಸಿದ್ದಾರೆ. ರಿಕ್ಷಾ ಚಾಲಕನಾಗಿರುವ ಆರೋಪಿಯು ಕುಪ್ಪೆಪದವು ಗ್ರಾಪಂನಲ್ಲಿ ನೀರು ಸರಬರಾಜು ಕೆಲಸವನ್ನೂ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

Comments (Click here to Expand)