varthabharthi

ಕರಾವಳಿ

ಅ. 14ರಿಂದ ಮಿತ್ತೂರಿನಲ್ಲಿ 'ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್'

ವಾರ್ತಾ ಭಾರತಿ : 12 Oct, 2017

ಬಂಟ್ವಾಳ, ಅ. 12: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ 'ಕ್ಯಾಂಪಸ್ ಗಲ್ವನೈಸ್ ಕ್ಯಾಂಪ್' ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರ ಅಧ್ಯಕ್ಷತೆಯಲ್ಲಿ ಅ.14ರಂದು ಸಂಜೆ 6 ಗಂಟೆಯಿಂದ  ಅ.15ರ ಮಧ್ಯಾಹ್ನ 12 ಗಂಟೆಯ ತನಕ ಕೆ.ಜಿ.ಎನ್. ಮಿತ್ತೂರಿನಲ್ಲಿ ನಡೆಯಲಿದೆ.

ಕೆ.ಜಿ.ಎನ್ ಮಿತ್ತೂರು ಸಂಸ್ಥೆಯ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ಎಸ್ಸೆಸ್ಸೆಫ್ ರಾಜ್ಯ ನಾಯಕ ಯಾಕೂಬ್ ಸಅದಿ ನಾವೂರು, ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ, ರಪೀಕ್ ಸಖಾಫಿ ಚೆರಿಯಪರಂಬ್, ಕಲಂದರ್ ಪದ್ಮುಂಜ, ಅಲ್ತಾಫ್ ಕುಂಪಲ, ಶಾಕಿರ್ ಹಾಜಿ ಮಿತ್ತೂರು, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Comments (Click here to Expand)