varthabharthi

ಸಿನಿಮಾ

ಶಾರುಕ್ ಚಿತ್ರದಲ್ಲಿ ದೀಪಿಕಾ

ವಾರ್ತಾ ಭಾರತಿ : 13 Oct, 2017

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ‘ಕುಳ್ಳ’ನಾಗಿ ಕಾಣಿಸಿಕೊಳ್ಳಲಿರುವ ಚಿತ್ರವು ದಿನದಿಂದ ದಿನಕ್ಕೆ ಕುತೂಹಲವನ್ನು ಸೃಷ್ಟಿಸುತ್ತಲೇ ಇದೆ. ಆನಂದ್ ಎಲ್.ರಾಯ್ ನಿರ್ದೇಶನದ ಈ ಚಿತ್ರದಲ್ಲಿ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಾಯಕಿಯರೆಂದು ಈಗಾಗಲೇ ಅನೌನ್ಸ್ ಆಗಿದೆ. ಇದರ ಜೊತೆಗೆ ದೀಪಿಕಾ ಪಡುಕೋಣೆ ಕೂಡಾ ಈ ಚಿತ್ರದ ಭಾಗವಾಗಲಿದ್ದಾರೆಂಬ ತಾಜಾ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಆದರೆ ಈ ಚಿತ್ರದಲ್ಲಿ ಆಕೆ ಪೋಷಕ ನಟಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲ ತನ್ನ ಪಾಲಿನ ಚಿತ್ರೀಕರಣವನ್ನು ಕೂಡಾ ಪೂರ್ತಿಗೊಳಿಸಿದ್ದಾರಂತೆ. ಒಟ್ಟಿನಲ್ಲಿ ಶಾರುಕ್ ಜೊತೆಗೆ ಬಾಲಿವುಡ್‌ನ ಟಾಪ್ ಹಿರೋಯಿನ್‌ಗಳಾದ ಅನುಷ್ಕಾ, ಕತ್ರಿನಾ ಹಾಗೂ ದೀಪಿಕಾ ನಟಿಸುತ್ತಿರುವುದರಿಂದ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಸೃಷ್ಟಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)