varthabharthi

ಸಿನಿಮಾ

ಇತ್ತೆಫಾಕ್ ಸಸ್ಪೆನ್ಸ್

ವಾರ್ತಾ ಭಾರತಿ : 13 Oct, 2017

ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ತನ್ನ ನಿರ್ಮಾಣದ, ‘ಇತ್ತೆಫಾಕ್’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಮಾಡುವ ಥ್ರಿಲ್ಲರ್ ಚಿತ್ರಗಳ ಯುಗವನ್ನು ‘ಇತ್ತೆಫಾಕ್’ ಬಾಲಿವುಡ್‌ಗೆ ಮರಳಿ ತರಲಿದೆಯೆಂದು ಅವರು ಆತ್ಮವಿಶ್ವಾಸದೊಂದಿಗೆ ಹೇಳುತ್ತಾರೆ.

ಇತ್ತೀಚೆಗೆ ‘ಇತ್ತೆಫಾಕ್’ ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು, ಅದರಲ್ಲಿ ಸಿದ್ದಾರ್ಥ್ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ ಹಾಗೂ ಅಕ್ಷಯ್ ಖಾನ್ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರವು 1969ರಲ್ಲಿ ತೆರೆಕಂಡ ಥ್ರಿಲ್ಲರ್ ಚಿತ್ರ ‘ಇತ್ತೆಫಾಕ್’ನ ರಿಮೇಕ್. ರಾಜೇಶ್ ಖನ್ನಾ ಹಾಗೂ ನಂದಾ ಮುಖ್ಯಪಾತ್ರಗಳಲ್ಲಿ ನಟಿಸಿದ್ದ ಆ ಚಿತ್ರವು ಭರ್ಜರಿ ಗೆಲುವು ಕಂಡಿತ್ತು. ರಾಜೇಶ್ ಖನ್ನಾ ವಹಿಸಿದ್ದ ಪಾತ್ರವನ್ನು ಈಗ ಸಿದ್ಧಾರ್ಥ ನಿರ್ವಹಿಸಿದ್ದಾರೆ. ತನ್ನ ಪತ್ನಿ ಕ್ಯಾಥರೀನ್ ಸೇಠಿ ಹಾಗೂ ಶೇಖರ್ ಸಿನ್ಹಾರನ್ನು ಕೊಲೆಗೈದ ಆರೋಪದ ಸುಳಿಗೆ ಸಿಲುಕಿದ ವಿಕ್ರಮ್ ಸೇಠಿಯ ಪಾತ್ರದಲ್ಲಿ ಸಿದ್ಧಾರ್ಥ ಕಾಣಿಸಿಕೊಂಡಿದ್ದಾರೆ.

ಶೇಖರ್ ಸಿನ್ಹಾನ ಪತ್ನಿ ಮಾಯಾಳಾಗಿ ಸೋನಮ್ ಸಿನ್ಹಾ ಹಾಗೂ ಈ ಅವಳಿ ಕೊಲೆಗಳ ರಹಸ್ಯವನ್ನು ಭೇದಿಸುವ ಹೊಣೆ ಹೊತ್ತ ಪೊಲೀಸ್ ಅಧಿಕಾರಿಯಾಗಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಹಾಗೂ ಶಾರುಕ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಈ ಚಿತ್ರ ನಿರ್ಮಿಸಿದ್ದಾರೆ. ಅಭಯ್ ಚೋಪ್ರಾ ನಿರ್ದೇಶನದ ಇತ್ತೆಫಾಕ್ ಎಲ್ಲಾ ಸರಿಹೋದಲ್ಲಿ ನವೆಂಬರ್ 3ರಂದು ರಿಲೀಸ್ ಆಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)