ಭಾರತ-ಆಸ್ಟ್ರೇಲಿಯ ಅಂತಿಮ ಟ್ವೆಂಟಿ-20 ಪಂದ್ಯ ಮಳೆಗಾಹುತಿ
ಹೈದರಾಬಾದ್, ಅ.13: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಇಲ್ಲಿ ಶುಕ್ರವಾರ ನಡೆಯಬೇಕಿದ್ದ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ಮಳೆಗಾಹುತಿಯಾಗಿದೆ.
ಅಂತಿಮ ಪಂದ್ಯ ಮಳೆಯಿಂದಾಗಿ ರದ್ಧಾಗುವುದರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ ಡಿ.ಎಲ್ ನಿಯಮದಂತೆ ಭಾರತ ಗೆಲುವು ದಾಖಲಿಸಿತ್ತು. ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ಭರ್ಜರಿ ಗೆಲುವು ದಾಖಲಿಸಿತ್ತು. ಕೊನೆಯ ಪಂದ್ಯ ಮಳೆಯಿಂದಾಗಿ ರದ್ಧಾಗುವುದರೊಂದಿಗೆ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧದ ಪ್ರವಾಸ ಸರಣಿಯನ್ನು ಮುಗಿಸಿದೆ.
ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 4-1 ಅಂತರದಲ್ಲಿ ಗೆದ್ದುಕೊಂಡಿತ್ತು.
Next Story