ಭಾರತಕ್ಕೆ ಕಿವೀಸ್ ಆಟಗಾರರ ಆಗಮನ
ಮುಂಬೈ, ಅ.13: ಭಾರತ ವಿರುದ್ಧ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಯನ್ನಾಡಲು ನ್ಯೂಝಿಲೆಂಡ್ ಆಟಗಾರರು ಶುಕ್ರವಾರ ಆಗಮಿಸಿದ್ದಾರೆ. ನ್ಯೂಝಿಲೆಂಡ್ ಹಿರಿಯ ಆಟಗಾರ ರಾಸ್ ಟೇಲರ್ ಭಾರತಕ್ಕೆ ತಲುಪಿರುವುದನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. ನ್ಯೂಝಿಲೆಂಡ್ ತಂಡದ 9 ಮಂದಿ ಆಟಗಾರರು ಭಾರತಕ್ಕೆ ಆಗಮಿಸಿದ್ದಾರೆ. ತಂಡದ ಉಳಿದ ಆರು ಮಂದಿ ಆಟಗಾರರನ್ನು ವಿಶಾಖಪಟ್ಟಣದಲ್ಲಿ ನಡೆಯಲಿರುವ ‘ಎ’ ತಂಡದ ಪಂದ್ಯದ ಬಳಿಕ ಆಯ್ಕೆ ಮಾಡಲಾಗುವುದು. ಭಾರತದ ವಿರುದ್ಧ ನ್ಯೂಝಿಲೆಂಡ್ ತಂಡ 3 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ. ಮೊದಲ ಏಕದಿನ ಪಂದ್ಯ ಅ.22ರಂದು ಮುಂಬೈನಲ್ಲಿ ನಡೆಯಲಿದೆ. ಸರಣಿ ಆರಂಭಕ್ಕೂ ಮುನ್ನ ನ್ಯೂಝಿಲೆಂಡ್ ತಂಡ ಅ.7 ಮತ್ತು ಅ.19ರಂದು ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಶನಿವಾರ ನ್ಯೂಝಿಲೆಂಡ್ ತಂಡದ ಆಟಗಾರರು ಸೀಮಿತ ಓವರ್ಗಳ ಸರಣಿಗೆ ಅಭ್ಯಾಸ ಆರಂಭಿಸಲಿದ್ದಾರೆ.
Next Story