ಸೊಮಾಲಿಯಾ ರಾಜಧಾನಿಯಲ್ಲಿ ಬಾಂಬ್ ಸ್ಫೋಟ: 189 ಮಂದಿ ಮೃತ್ಯು
200ಕ್ಕೂ ಅಧಿಕ ಮಂದಿಗೆ ಗಾಯ
ಮೊಗಾಡಿಶು, ಅ.15: ಸೊಮಾಲಿಯಾದ ರಾಜಧಾನಿ ಸಂಭವಿಸಿದ ಭಾರೀ ಬಾಂಬ್ ಸ್ಫೋಟದಲ್ಲಿ 189 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವೈದ್ಯರು ಹರಸಾಹಸ ಪಡುತ್ತಿದ್ದು, ಕೆಲವರಿಗೆ ಗುರುತಿಸಲಾಗದಷ್ಟು ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಅಸ್ತವ್ಯಸ್ತಗೊಂಡಿರುವ ನಗರದಲ್ಲಿ ಕುಟುಂಬಗಳು ತಮ್ಮವರಿಗಾಗಿ ಅಲೆದಾಡುತ್ತಿವೆ. ಮೊಗಾಡಿಶುವಿನ 10 ವರ್ಷಗಳ ಸೇವೆಯಲ್ಲಿ ಇಂತಹ ಘಟನೆಯನ್ನು ಕಂಡಿಲ್ಲ” ಎಂದು ಆ್ಯಂಬುಲನ್ಸ್ ಸೇವೆ ಟ್ವೀಟ್ ಮಾಡಿದೆ.
Next Story