ಏಷ್ಯಾಕಪ್ ಹಾಕಿ : ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಢಾಕಾ, ಅ.15: ಏಷ್ಯಾಕಪ್ ಹಾಕಿ ಟೂರ್ನಮೆಂಟ್ನ ‘ಎ’ ಗ್ರೂಪ್ನ ಕೊನೆಯ ಪಂದ್ಯದಲ್ಲಿ ಇಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.
ಇದರೊಂದಿಗೆ ಭಾರತ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಜಪಾನ್, ಬಾಂಗ್ಲಾದೇಶ ಮತ್ತು ಇದೀಗ ಪಾಕಿಸ್ತಾನ ವಿರುದ್ಧ ಗೆಲುವಿನೊಂದಿಗೆ ಅಜೇಯವಾಗಿ ಭಾರತ ನಾಕೌಟ್ ಹಂತ ತಲುಪಿದೆ.
ಭಾರತದ ಪರ ಚಿಂಗ್ಲೆನ್ಸನಾ (17ನೆ ನಿಮಿಷ), ರಮಣ್ದೀಪ್ ಸಿಂಗ್ (44ನೆ ನಿಮಿಷ ) ಮತ್ತು ಹರ್ಮನ್ಪ್ರೀತ್ (45ನೆ ನಿಮಿಷ) ಗೋಲು ದಾಖಲಿಸಿದರು. ಪಾಕಿಸ್ತಾನದ ಅಲಿ ಶಾನ್( 49ನೆ ನಿಮಿಷ) ಗೋಲು ದಾಖಲಿಸಿದರು.
Next Story