varthabharthi

ಈ ದಿನ

ಈ ದಿನ

ಮದರ್ ತೆರೇಸಾಗೆ ನೊಬೆಲ್ ಶಾಂತಿ ಪುರಸ್ಕಾರ

ವಾರ್ತಾ ಭಾರತಿ : 17 Oct, 2017

* 1976: ಮಹಾನ್ ಮಾನವತಾವಾದಿ ಮದರ್ ತೆರೇಸಾರಿಗೆ ಈ ದಿನ ನೊಬೆಲ್ ಶಾಂತಿ ಪುರಸ್ಕಾರವನ್ನು ಪ್ರದಾನಿಸಿತು. ಅನಾಥರ, ಮಕ್ಕಳ, ಯುದ್ಧ ಸಂತ್ರಸ್ತರ, ರೋಗಿಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಮಾನವೀಯತೆಯ ಅಮ್ಮ ಎಂದು ಗುರುತಿಸಿಕೊಂಡ ಮದರ್ ತೆರೇಸಾರಿಗೆ ಈ ಪ್ರಶಸ್ತಿ ಬಂದದ್ದು ಪ್ರಶಸ್ತಿಯ ಘನತೆಯನ್ನು ಹೆಚ್ಚುವಂತೆ ಮಾಡಿತು. ಮರಣಶಯ್ಯೆಯಲ್ಲಿರುವ ಎಷ್ಟೋ ಜನರಿಗೆ ಅವರು ತೋರಿದ ನಿಸ್ವಾರ್ಥ ವಾತ್ಸಲ್ಯವನ್ನು ವಿಶ್ವವೇ ಮೆಚ್ಚಿಕೊಂಡಿದೆ. * 1912: ಬಲ್ಗೇರಿಯಾ, ಗ್ರೀಸ್ ಮತ್ತು ಸೆರ್ಬಿಯಾ ಸಂಯುಕ್ತವಾಗಿ ಟರ್ಕಿ ಮೇಲೆ ಯುದ್ಧ ಘೋಷಿಸಿದವು.

* 1933: ಸುಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ನಾಝಿ ಜರ್ಮನಿಯ ನಿರಾಶ್ರಿತರಾಗಿ ಅಮೆರಿಕಕ್ಕೆ ತೆರಳಿದರು.

* 1957: ಫ್ರೆಂಚ್ ಲೇಖಕ ಆಲ್ಬರ್ಟ್

ಕಾಮು ಸಾಹಿತ್ಯದ ನೊಬೆಲ್ ಪುರಸ್ಕಾರಕ್ಕೆ ಭಾಜನರಾದರು.

* 1983: ಫ್ರೆಂಚ್ ಅರ್ಥಶಾಸ್ತ್ರಜ್ಞ ಗೆರಾಲ್ಡ್ ದಿಬ್ರೂ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು.

* 1985: ಫ್ರೆಂಚ್ ಲೇಖಕ ಕ್ಲಾಡ್ ಸೈಮನ್ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಭಾಜನರಾದರು.

* 1988: ಉಗಾಂಡಾದ ವಿಮಾನವೊಂದು ರೋಮ್ ಸಮೀಪ ಹಿಮಾಚ್ಛಾದಿತ ಪ್ರದೇಶದಲ್ಲಿ ಪತನಗೊಂಡ ಪರಿಣಾಮ 31 ಜನರು ಸಾವಿಗೀಡಾದರು.

* 1998: ನೈಝೀರಿಯಾದ ನಿಗರ್ ಪ್ರದೇಶದ ಜೆಸ್ಸಿ ಎಂಬಲ್ಲಿ ಪೆಟ್ರೋಲಿಯಂ ಪೈಪ್ ಸ್ಪೋಟಿಸಿದ ಪರಿಣಾಮ 1,200 ಜನ ತಮ್ಮ ಪ್ರಾಣ ಕಳೆದುಕೊಂಡರು.

* 1817: ಸಾಮಾಜಿಕ ಹೋರಾಟಗಾರ, ವಿದ್ವಾಂಸ, ಶಿಕ್ಷಣತಜ್ಞ ಸರ್ ಸೈಯದ್ ಅಹ್ಮದ್ ಖಾನ್ ಜನ್ಮದಿನ ಇಂದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)