50 ಭಾರತೀಯ ಶಾಂತಿ ಪಾಲಕರಿಗೆ ವಿಶ್ವಸಂಸ್ಥೆ ಪದಕ
ವಿಶ್ವಸಂಸ್ಥೆ, ಅ. 17: ದಕ್ಷಿಣ ಸುಡಾನ್ಗೆ ನಿಯೋಜಿಸಲ್ಪಟ್ಟಿರುವ 50 ಭಾರತೀಯ ಶಾಂತಿಪಾಲನಾ ಸೈನಿಕರಿಗೆ ವಿಶ್ವಸಂಸ್ಥೆಯ ಪದಕವನ್ನು ನೀಡಲಾಗಿದೆ.
ಅವರ ವೃತ್ತಿಪರತೆ ಮತ್ತು ನಾಗರಿಕರ ರಕ್ಷಣೆಯಲ್ಲಿ ಹಾಗೂ ಸಂಘರ್ಷ ಪೀಡಿತ ದೇಶದಲ್ಲಿ ಶಾಶ್ವತ ಶಾಂತಿ ನೆಲೆಸುವಲ್ಲಿ ಅವರು ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.
ದಕ್ಷಿಣ ಸುಡಾನ್ನ ಜಾಂಗ್ಲೈ ವಲಯದಲ್ಲಿ ಅವರನ್ನು ನಿಯೋಜಿಸಲಾಗಿತ್ತು. ಅವರು ವಿಶ್ವಸಂಸ್ಥೆಯ ದಕ್ಷಿಣ ಸುಡಾನ್ನ ಕಾರ್ಯಕ್ರಮ (ಯುಎನ್ಎಂಐಎಸ್ಎಸ್)ದ ಭಾಗವಾಗಿದ್ದರು.
ಯುಎನ್ಎಂಐಎಸ್ಎಸ್ ಪಡೆ ಕಮಾಂಡರ್ ಜನರಲ್ ಫ್ರಾಂಕ್ ಮುಶ್ಯೊ ಕಮಂಝಿ ಇತ್ತೀಚೆಗೆ ಈ ಪ್ರಶಸ್ತಿ ನೀಡಿದ್ದಾರೆ.
Next Story