ದೀಪಾವಳಿಯ ಖುಷಿಯನ್ನು ಸೈನಿಕರೊಂದಿಗೆ ಹಂಚಿದ ಯೂಸುಫ್ ಪಠಾಣ್ ಗೆ ಟ್ವಿಟ್ಟರಿಗರ ಮೆಚ್ಚುಗೆ
ಹೊಸದಿಲ್ಲಿ, ಅ.19: ವಿಶೇಷ ರೀತಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮವನ್ನು ಹಂಚಿದ ಕ್ರಿಕೆಟಿಗ ಯೂಸುಫ್ ಪಠಾಣ್ ಅವರಿಗೆ ಟ್ವಿಟ್ಟರಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ದೀಪಾವಳಿ ಸಂದರ್ಭ ಬರೋಡಾ ವಿಮಾನ ನಿಲ್ದಾಣದಲ್ಲಿ ಸೈನಿಕರೊಂದಿಗೆ ಸಿಹಿ ಹಂಚಿದ ಫೋಟೊವನ್ನು ಟ್ವೀಟ್ ಮಾಡಿರುವ ಯೂಸುಫ್ ಪಠಾಣ್, ಹಬ್ಬದ ಸಮಯದಲ್ಲೂ ಸೇವೆ ಸಲ್ಲಿಸುವ ಸೈನಿಕರ ಬಗ್ಗೆ ಅಪಾರ ಗೌರವವಿದೆ ಎಂದವರು ಹೇಳಿದ್ದಾರೆ.
ಯೂಸುಫ್ ಪಠಾಣ್ ಅವರ ಈ ಕಾರ್ಯಕ್ಕೆ ಟ್ವಿಟ್ಟರಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. “ಸೈನಿಕರ ಬಗ್ಗೆ ವಿಶೇಷ ಕಾಳಜಿ ತೋರಿಸಿದ ಯೂಸುಫ್ ಅವರಿಗೆ ಸಲಾಮ್”, “ಶುಕ್ರಿಯಾ ಪಠಾಣ್” ಎಂದು ಟ್ವಿಟ್ಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Next Story