ಪತಿ ಅನೀಸ್ ಜೊತೆ ತೆರಳಲು ಶ್ರುತಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್
"ಅಂತರ್ ಧರ್ಮೀಯ ಮದುವೆಗಳನ್ನು ಪ್ರೋತ್ಸಾಹಿಸಬೇಕು"
ಕೊಚ್ಚಿ, ಅ.19: ಕಣ್ಣೂರು ನಿವಾಸಿಗಳಾದ ಶ್ರುತಿ ಮತ್ತು ಅನೀಸ್ ಹಮೀದ್ ಎಂಬವರ ಅಂತರ್ ಧರ್ಮೀಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಈ ಜೋಡಿಯ ಮದುವೆ ‘ಮಾನ್ಯ’ ಎಂದು ಪರಿಗಣಿಸಿರುವ ಕೇರಳ ಹೈಕೋರ್ಟ್ ಶ್ರುತಿ ಅನೀಸ್ ರೊಂದಿಗೆ ತೆರಳಲು ಅನುಮತಿಸಿದೆ ಎಂದು ಎಎನ್ ಐ ವರದಿ ಮಾಡಿದೆ.
“ಎಲ್ಲಾ ಅಂತರ್ ಧರ್ಮೀಯ ಮದುವೆಗಳನ್ನು ಲವ್ ಜಿಹಾದ್ ಎನ್ನಲು ಸಾಧ್ಯವಿಲ್ಲ. ಪ್ರೀತಿಗೆ ಯಾವುದೇ ಗಡಿರೇಖೆಗಳಿಲ್ಲದಿರುವುದರಿಂದ ಇಂತಹ ಮದುವೆಗಳನ್ನು ಪ್ರೋತ್ಸಾಹಿಸಬೇಕು" ಎಂದು ಕೋರ್ಟ್ ಹೇಳಿದೆ ಎನ್ನಲಾಗಿದೆ.
ಅನೀಸ್ ಹಮೀದ್ ಶ್ರುತಿಯನ್ನು ಅಪಹರಿಸಿದ್ದು, ಬಲವಂತವಾಗಿ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಕ್ಟೋಬರ್ 10 ರಂದು ಹಾದಿಯಾ ಪ್ರಕರಣದಲ್ಲಿ “ಎಲ್ಲಾ ಅಂತರ್ ಧರ್ಮೀಯ ವಿವಾಹಗಳನ್ನು ಲವ್ ಜಿಹಾದ್ ಎಂದು ಹೇಳಲು ಸಾಧ್ಯವಾಗುವುದಿಲ್ಲ” ಎಂದು ಹೈಕೋರ್ಟ್ ಹೇಳಿತ್ತು.
Next Story