ಉಡುಪಿ: ತಾಲೂಕು ಮಟ್ಟದ ಕಲಾಶ್ರೀ ಶಿಬಿರ
ಉಡುಪಿ, ಅ.19: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಹಾಗೂ ಬ್ರಹ್ಮಾವರ ಕಚೆೇರಿ ವತಿಯಿಂದ ಉಡುಪಿ ತಾಲೂಕು ಮಟ್ಟದ ಕಲಾಶ್ರೀ ಶಿಬಿರವನ್ನು ಅ.23ರಂದು ಜಿಲ್ಲಾ ಬಾಲಭವನ ಉಡುಪಿಯಲ್ಲಿ ಏರ್ಪಡಿಸಲಾಗಿದೆ.
ಉಡುಪಿ ತಾಲೂಕಿನ ವಿವಿಧ ಶಾಲೆಗಳ 9ರಿಂದ 16ವರ್ಷ ವಯೋಮಿತಿ ಯೊಳಗಿನ ಮಕ್ಕಳು ಪೂರ್ವಾಹ್ನ 10:30ಕ್ಕೆ ಸರಿಯಾಗಿ ಜಿಲ್ಲಾ ಬಾಲವನ ಬ್ರಹ್ಮಗಿರಿಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸ್ಪರ್ಧೆಗಳ ಕ್ಷೇತ್ರಗಳು: ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರ. ಈ ಕುರಿತ ಹೆಚ್ಚಿನ ಮಾಹಿತಿ ಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಡುಪಿ ಇವರನ್ನು ಅಥವಾ ದೂರವಾಣಿ ಸಂಖ್ಯೆ: 0820-2524055ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story