ಅಕ್ರಮ ಮದ್ಯ ವಶ: ಆರೋಪಿ ಪರಾರಿ
ಚಿಕ್ಕಮಗಳೂರು, ಅ.19: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ದಾಳಿ ನಡೆಸಿದ ತರೀಕೆರೆ ಪೊಲೀಸರು ಮದ್ಯವನ್ನು ವಶಪಡಿಸಿಕೊಂಡಿದ್ದು, ಆರೋಪಿ ತಲೆ ಮೆರೆಸಿಕೊಂಡಿದ್ದಾನೆ.
ಆರೋಪಿಯನ್ನು ಎಂ.ಸಿ.ಹಳ್ಳಿ ಗ್ರಾಮದ ರುದ್ರೇಶ್(45) ಎಂದು ಗುರುತಿಸಲಾಗಿದೆ. ಈತ ಎಂ.ಸಿ.ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿ ಬಿಟ್ಟು ಹೋಗಿದ್ದ 2,300 ರೂ.ವೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Next Story