ಬಿಗ್ ಬ್ಯಾಶ್ ಲೀಗ್ ಸೇರಿದ ಕರ್ನಾಟಕದ ಕ್ರಿಕೆಟ್ ಆಟಗಾರ್ತಿ ವೇದಾ
ಹೊಸದಿಲ್ಲಿ, ಅ.20: ಕರ್ನಾಟಕದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಆಸ್ಟ್ರೇಲಿಯದ ವೃತ್ತಿಪರ ಕ್ರಿಕೆಟ್ ಲೀಗ್ ಬಿಗ್ ಬ್ಯಾಶ್ ಸೇರ್ಪಡೆಗೊಂಡಿದ್ದಾರೆ.
ವೇದಾ ಅವರು ಬಿಗ್ ಬ್ಯಾಶ್ ಸೇರಿದ ಭಾರತದ ಮೂರನೆ ಮಹಿಳಾ ಕ್ರಿಕೆಟರ್. ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ ಈ ಮೊದಲು ಮಹಿಳೆಯರ ಬಿಗ್ ಬ್ಯಾಶ್ ಲೀಗ್ ಸೇರಿದ್ದರು.
ಬಿಗ್ ಬ್ಯಾಶ್ ನ ಹೋಬರ್ಟ್ ಹರಿಕೇನ್ಸ್ ಜೊತೆ 1 ವರ್ಷದ ಒಪ್ಪಂದಕ್ಕೆ ಸಹಿ ಹಾಕಿರುವ ವೇದಾ ಡಿ.9ರಂದು ಆರಂಭವಾಗಲಿರುವ ಬಿಗ್ ಬ್ಯಾಶ್ ಟೂರ್ನಿಯ 10 ಪಂದ್ಯಗಳಲ್ಲಿ ಆಡಲಿದ್ದಾರೆ.
ವೇದಾ ಕೃಷ್ಣ ಮೂರ್ತಿ ಅವರು ಇಂಗ್ಲೆಂಡ್ ನಲ್ಲಿ ನಡೆದ ಮಹಿಳೆಯರ ಐಸಿಸಿ ವಿಶ್ವಕಪ್ ನಲ್ಲಿ ಭಾರತದ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು.
Next Story