varthabharthi

ಮಾಹಿತಿ - ಮಾರ್ಗದರ್ಶನ

ಬಿವಿಟಿಯಲ್ಲಿ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 20 Oct, 2017

ಮಣಿಪಾಲ, ಅ.20: ಹೊಲಿಗೆ ತರಬೇತಿ ಪಡೆಯಲು ಇಚ್ಚಿಸುವ ಆಸಕ್ತ ಮಹಿಳೆಯರಿಗೆ ಅ.23ರಿಂದ ಮೂರು ವಾರಗಳ ಕಾಲ ಹೊಲಿಗೆ ತರಬೇತಿ ಯನ್ನು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್ಸೆಸೆಲ್ಸಿ, ಪಿಯುಸಿ ಹಾಗೂ ಡಿಗ್ರಿ ಮುಗಿಸಿ ಉದ್ಯೋಗವಿಲ್ಲದೆ ಮನೆಯಲ್ಲಿ ರುವವರಿಗೆ ತರಬೇತಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಮಹಿಳೆಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ಅಗತ್ಯ ಉಳ್ಳವರಿಗೆ ವಸತಿ ವ್ಯವಸ್ಥೆ ನೀಡಲಾಗುವುದು.

ಅಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವತ್ತಿತರ ವಿವರಗಳನ್ನು ದೂರವಾಣಿ ಸಂಖ್ಯೆ:0820-2570263 ಇಲ್ಲಿಗೆ ಕರೆಮಾಡಿ ತಿಳಿಸಬಹುದು. ಪೆರಂಪಳ್ಳಿಯ ಅಂಬಾಗಿಲು ರಸ್ತೆಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಭಾರತೀಯ ವಿಕಾಸ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)